ಚೀಸ್ನಲ್ಲಿ ಕ್ಯಾಲ್ಸಿಯಂ, ಪ್ರೊಟೀನ್, ಫಾಸ್ಫರಸ್, ಸತು, ವಿಟಮಿನ್ A ಮತ್ತು B 12 ಸಮೃದ್ಧವಾಗಿದೆ.
ಚೀಸ್ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಹೊಂದಿದ್ದು, ಇದು ಮೂಳೆಗಳ ಆರೋಗ್ಯಕ್ಕೆ ಅವಶ್ಯಕ.
ಚೀಸ್ನಲ್ಲಿ ಉತ್ತಮ ಪ್ರಮಾಣದ ವಿಟಮಿನ್ A ಮತ್ತು B 12 ಇದ್ದು, ಇದು ಪ್ರತಿರಕ್ಷಣಾ ವ್ಯವಸ್ಥೆಗೆ ಮುಖ್ಯವಾಗಿದೆ.
ಚೀಸ್ನಲ್ಲಿರುವ ವಿಟಮಿನ್ A ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಿದ್ದು, ವಿಟಮಿನ್ B 12 ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಚೀಸ್ನಲ್ಲಿ ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳಿರುತ್ತವೆ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಒಮೆಗಾ -3 ಕೊಬ್ಬಿನಾಮ್ಲಗಳು ರಕ್ತದೊತ್ತಡ, ಕೊಲೆಸ್ಟ್ರಾಲ್ ಮಟ್ಟ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಕಾರಿ.
ಚೀಸ್ಗಳು ಪ್ರೋಬಯಾಟಿಕ್ಗಳನ್ನು ಹೊಂದಿರುತ್ತವೆ. ಇದು ಕರುಳಿನ ಆರೋಗ್ಯಕ್ಕೆ ಅವಶ್ಯಕ ಮತ್ತು ಇದು ಜೀರ್ಣಕ್ರಿಯೆಯನ್ನುಸುಧಾರಿಸುತ್ತದೆ.