ರಾತ್ರಿ ಸಾಕಷ್ಟು ಜನರು ನಿದ್ರಾಹೀನತೆಯಿಂದ ಪರಿತಪಿಸುತ್ತಾರೆ, ರಾತ್ರಿ ಚೆನ್ನಾಗಿ ನಿದ್ದೆ ಬರಲು ಲವಂಗ ನೆರವಾಗುತ್ತದೆ.
ಪೊಟ್ಯಾಸಿಯಂ, ಕಬ್ಬಿಣ, ಕ್ಯಾಲ್ಸಿಯಂನಂತಹ ಅನೇಕ ಖನಿಜಗಳು ಮತ್ತು ವಿಟಮಿನ್ಗಳು ಲವಂಗದಲ್ಲಿ ಕಂಡುಬರುತ್ತವೆ.
ನಿಯಮಿತವಾಗಿ ಲವಂಗ ಸೇವನೆಯಿಂದ ಹಲ್ಲು ನೋವು ಬರುವುದಿಲ್ಲ, ಹಲ್ಲುಗಳ ತೊಂದರೆ ಕಡಿಮೆಯಾಗುತ್ತವೆ.
ಲವಂಗ ತಿನ್ನುವುದರಿಂದ ಚಯಾಪಚಯ ಉತ್ತಮಗೊಳ್ಳುತ್ತದೆ, ತೂಕ ಕಳೆದುಕೊಳ್ಳಲು ಸಹಕಾರಿ.
ಲವಂಗ ಸೇವನೆಯಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
ಲವಂಗ ಸೇವನೆಯಿಂದ ಮಲಬದ್ಧತೆ, ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಮುಕ್ತಿ ದೊರಕುತ್ತದೆ.
ಕೆಮ್ಮು, ನೆಗಡಿ, ವೈರಲ್ ಸೋಂಕುಗಳು, ಬ್ರಾಂಕೈಟಿಸ್, ಸೈನಸ್ ಮತ್ತು ಅಸ್ತಮಾ ನಿವಾರಿಸಲು ಲವಂಗ ನೆರವಾಗುತ್ತದೆ.