ಬೇರೆಲ್ಲಾ ಹಣ್ಣಿಗಿಂತಲೂ ಅವಕಾಡೊ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಅವಕಾಡೊದಲ್ಲಿ ಒಳ್ಳೆಯ ಕೊಬ್ಬು, ನಾರಿನಾಂಶ, ವಿಟಮಿನ್‌ಗಳು, ಖನಿಜಾಂಶಗಳು, ಆಂಟಿ-ಆಕ್ಸಿಡೆಂಟ್ & ಫೈಟೊಸ್ಟೆರಾಲ್ ಸಮೃದ್ಧವಾಗಿವೆ.
ಬೆಣ್ಣೆ ಹಣ್ಣು ಜೀರ್ಣಕ್ರಿಯೆ ಸುಧಾರಿಸುವುದು, ಯಕೃತ್‌ಅನ್ನು ಆರೋಗ್ಯವಾಗಿಡುವ ಮೂಲಕ ಸಮಗ್ರ ಆರೋಗ್ಯವನ್ನು ವೃದ್ಧಿಸುತ್ತದೆ.
ಅವಕಾಡೊದಲ್ಲಿರುವ ವಿಟಮಿನ್ B5, ವಿಟಮಿನ್ K ಮತ್ತು ವಿಟಮಿನ್ E ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಣೆ ಮಾಡುವುದು.
ಬೆಣ್ಣೆ ಹಣ್ಣಿನಲ್ಲಿರುವ ದೇಹವು ಹೀರಿಕೊಳ್ಳುವಂತಹ ಪೋಷಕಾಂಶಗಳು ಚಯಾಪಚಯ ಸುಧಾರಣೆ ಮಾಡಲು ನೆರವಾಗುವುದು.
ಅವಕಾಡೊದಲ್ಲಿರುವ ಏಕಪರ್ಯಾಪ್ತ ಮತ್ತು ಬಹುಪರ್ಯಾಪ್ತ ಕೊಬ್ಬು ದೇಹದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಸಹಕಾರಿ.
ಬೆಣ್ಣೆ ಹಣ್ಣು ಹೃದಯದ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.