ಬೆಂಡೆಕಾಯಿಯಲ್ಲಿ ಮೆಗ್ನೀಷಿಯಂ, ವಿಟಮಿನ್ A, K, ನಾರಿನಾಂಶ & ಆಂಟಿ ಆಕ್ಸಿಡೆಂಟ್ ಅಂಶಗಳು ಸಮೃದ್ಧವಾಗಿವೆ.
ಬೆಂಡೆಕಾಯಿ ಸೇವನೆಯು ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣ ಮಾಡುವಲ್ಲಿ ಸಹಕಾರಿಯಾಗಿದೆ.
ಮಧುಮೇಹಿಗಳು ವಾರದಲ್ಲಿ ಎರಡ್ಮೂರು ಬಾರಿಯಾದರೂ ಬೆಂಡೆಕಾಯಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು.
ಬೆಂಡೆಕಾಯಿಯಲ್ಲಿ ಕಡಿಮೆ ಕ್ಯಾಲೋರಿ ಹಾಗೂ ಕಾರ್ಬೋ ಹೈಡ್ರೇಟ್ ಇದ್ದು, ದೇಹದ ತೂಕ ಇಳಿಸಲು ಸಹಕಾರಿಯಾಗಿದೆ.
ಈ ತರಕಾರಿಯಲ್ಲಿ ನಾರಿನಾಂಶ ಅಧಿಕ ಪ್ರಮಾಣದಲ್ಲಿದ್ದು, ಹೊಟ್ಟೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಕಡಿವಾಣ ಹಾಕುತ್ತದೆ.
ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ, ಅಜೀರ್ಣತೆ ಹಾಗೂ ಮಲಬದ್ಧತೆ ಸಮಸ್ಯೆಯನ್ನು ದೂರಮಾಡಲು ಬೆಂಡೆಕಾಯಿ ನೆರವಾಗುತ್ತದೆ.
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ರಕ್ತಹೀನತೆ ತಡೆಯಲು ಬೆಂಡೆಕಾಯಿ ನೆರವಾಗುತ್ತದೆ.
ಬೆಂಡೆಕಾಯಿ ರಕ್ತದಲ್ಲಿ ಕಂಡುಬರುವ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡಿ, ಹೃದಯದ ಆರೋಗ್ಯ ಕಾಪಾಡುತ್ತದೆ.