ಕರಿಬೇವು ಸೇವನೆಯಿಂದ ದೇಹದಲ್ಲಿ ಶೇಖರಣೆಯಾದ ಅನಗತ್ಯ ಕೊಬ್ಬು ಕರಗುತ್ತದೆ. ಇದು ತೂಕ ಇಳಿಕೆಗೆ ಸಹಕಾರಿಯಾಗಿದೆ.
ಕರಿಬೇವು ಸೇವನೆಯಿಂದ ನಮ್ಮ ದೇಹದ ಸಾಕಷ್ಟು ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಕರಿಬೇವಿನ ಎಲೆಗಳಲ್ಲಿ ವಿಟಮಿನ್ A, B, C ಮತ್ತು B12 ಗಳು ಅಧಿಕವಾಗಿರುತ್ತದೆ. ಕಬ್ಬಿಣ ಮತ್ತು ಕ್ಯಾಲ್ಸಿಯಂ ಪ್ರಮಾಣ ಸಹ ಅಧಿಕವಾಗಿದೆ.
ನೈಸರ್ಗಿಕ ಗಿಡಮೂಲಿಕೆ ಕರಿಬೇವಿನ ಎಲೆಯು ಸಮೃದ್ಧ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಹೀಗಾಗಿ ಇದನ್ನು ಪೋಷಕಾಂಶಗಳ ಆಗರ, ಶಕ್ತಿ ಮತ್ತು ಮನೆ ಎಂದು ಕರೆಯಲಾಗುತ್ತದೆ.
ಕರಿಬೇವಿನ ಸಾರವು ನರಮಂಡಲ, ಹೃದಯ, ಮೆದುಳು ಮತ್ತು ಮೂತ್ರಕೋಶಗಳ ಆರೋಗ್ಯವನ್ನು ಸಹ ಕಾಪಾಡುತ್ತದೆ.
ಕರಿ ಬೇವಿನಲ್ಲಿರುವ ಔಷಧಿಯ ಸಾರ ಹೊಟ್ಟೆಗೆ ಸಂಬಂಧಿಸಿದ ರೋಗಗಳಿಂದ ಮುಕ್ತಿ ನೀಡುತ್ತದೆ.
ಕರಿಬೇವಿನಲ್ಲಿರುವ ರೋಗ ನಿರೋಧಕಗಳು ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಮತ್ತು ರೋಗಗಳಿಂದ ದೂರವಿಡಲು ಸಹಕಾರಿ.