ಕರಿಬೇವಿನ ಎಲೆಗಳಲ್ಲಿ ಕಾರ್ಬೋಹೈಡ್ರೇಟ್ಗಳು, ಕ್ಯಾಲ್ಸಿಯಂ, ಫೈಬರ್, ರಂಜಕ, ಕಬ್ಬಿಣ ಮತ್ತು ಅನೇಕ ವಿಟಮಿನ್ಗಳು ಸಮೃದ್ಧವಾಗಿವೆ.
ಕರಿಬೇವು ಸೇವನೆಯಿಂದ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ.
ಕರಿಬೇವು ಅನೇಕ ಸೋಂಕುಗಳು ಸಹ ತಗುಲದಂತೆ ನೋಡಿಕೊಳ್ಳುತ್ತದೆ.
ಕರಿಬೇವಿನ ಪೌಷ್ಠಿಕಾಂಶವನ್ನು ಪರಿಗಣಿಸಿ ಪ್ರತಿಯೊಬ್ಬರೂ ಕರಿಬೇವಿನ ಎಲೆಗಳನ್ನು ತಿನ್ನಬೇಕು.
ಅತಿಸಾರ, ಅಜೀರ್ಣ, ಹೆಚ್ಚಿನ ಆಮ್ಮ ಸ್ರವಿಸುವಿಕೆ, ಪೆಪ್ಟಿಕ್ ಹುಣ್ಣುಗಳು, ಭೇದಿ, ಮಧುಮೇಹ ಮತ್ತು ಅನಾರೋಗ್ಯಕರ ಕೊಲೆಸ್ಟ್ರಾಲ್ ಸಮಸ್ಯೆಗಳಿಗೆ ಕರಿಬೇವು ರಾಮಬಾಣ.
ಕರಿಬೇವು ಕ್ಯಾನ್ಸರ್ ಹೋರಾಟದ ಗುಣಲಕ್ಷಣ ಹೊಂದಿದೆ. ಪಿತ್ತಜನಕಾಂಗ ರಕ್ಷಿಸಲು ಕರಿಬೇವು ಸೇವಿಸಬೇಕು.
ಕರಿಬೇವು ಕೂದಲ ಬೆಳವಣಿಗೆಗೆ ಮತ್ತು ಕಣ್ಣಿನ ದೃಷ್ಟಿಗೆ ಒಳ್ಳೆಯದು.
ಲಿವರ್ ರಕ್ಷಿಸುವವಲ್ಲಿ ಮತ್ತು ಚರ್ಮದ ಆರೈಕೆಯಲ್ಲಿ ಕರಿಬೇವಿನ ಎಲೆಗಳು ಸಹಕಾರಿ.