ಹೆಚ್ಚಿನ ಪೋಷಕಾಂಶ

ಜಗತ್ತಿನಲ್ಲಿ ಹೆಚ್ಚು ಸೇವಿಸುವ ಹಣ್ಣುಗಳಲ್ಲಿ ಬಾಳೆಹಣ್ಣು ಒಂದು. ಇದು ಹೆಚ್ಚಿನ ಪೋಷಕಾಂಶ ಹೊಂದಿರುವ ಆರೋಗ್ಯದ ಭಂಡಾರ. ಬಾಳೆಹಣ್ಣು ನಿಮ್ಮ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನ ನೀಡುತ್ತದೆ.

Puttaraj K Alur
Feb 24,2023

ಜೀರ್ಣಕ್ರಿಯೆ ಚೆನ್ನಾಗಿರುತ್ತದೆ

ಊಟದ ಕೊನೆಯಲ್ಲಿ 1 ಬಾಳೆಹಣ್ಣು ತಿಂದರೆ ನಿಮಗೆ ತೃಪ್ತಿಯಾಗುತ್ತೆ. ದೇಹ ಹಗರುವಾಗುವ ಜೊತೆಗೆ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ. ಬಾಳೆಹಣ್ಣು ಸೇವನೆಯಿಂದ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು.

ರೋಗನಿರೋಧಕ ಶಕ್ತಿ

ಬಾಳೆಹಣ್ಣಿನಲ್ಲಿ ವಿಟಮಿನ್ C ಅಂಶ ಹೆಚ್ಚಾಗಿರುವುದರಿಂದ ರೋಗನಿರೋಧಕ ಶಕ್ತಿಯ ವಿರುದ್ಧ ಹೋರಾಡಲು ನೆರವಾಗುತ್ತದೆ.

ಪೋಷಕಾಂಶಗಳು & ವಿಟಮಿನ್ಸ್ಗಳು

ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹಾಗೂ ವಿಟಮಿನ್ಸ್ಗಳು ಹೇರಳವಾಗಿ ಸಿಗುವುದರಿಂದ ದೇಹಕ್ಕೆ ಸಾಕಷ್ಟು ಖನಿಜಾಂಶ ಸಿಗುತ್ತದೆ.

ಅನೇಕ ಆರೋಗ್ಯ ಸಮಸ್ಯೆ

ಸರಿಯಾದ ಸಮಯಕ್ಕೆ ಬಾಳೆಹಣ್ಣು ಸೇವಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಜೀರ್ಣಕ್ರಿಯೆ ಹೆಚ್ಚಿಸುತ್ತದೆ

ರಾತ್ರಿ ಮಲಗುವ ಮುನ್ನ 1-2 ಬಾಳೆಹಣ್ಣು ತಿನ್ನುವುದರಿಂದ ಯಾವುದೇ ಸಮಸ್ಯೆ ಇಲ್ಲ. ಇದರಲ್ಲಿರುವ ನಾರಿನಾಂಶವು ಜೀರ್ಣಕ್ರಿಯೆ ಹೆಚ್ಚಿಸುತ್ತದೆ.

ಒಳ್ಳೆಯ ನಿದ್ರೆಗೆ ಸಹಕಾರಿ

ಬಾಳೆಹಣ್ಣಿನಲ್ಲಿರುವ ಮೆಗ್ನಿಶಿಯಂ ಅಂಶವು ಒಳ್ಳೆಯ ನಿದ್ರೆಗೆ ಸಹಕಾರಿಯಾಗಿದೆ.

ಶೀತ ಮತ್ತು ಕೆಮ್ಮಿನ ಸಮಸ್ಯೆ

ಶೀತ ಮತ್ತು ಕೆಮ್ಮಿನ ಸಮಸ್ಯೆ ಇರುವಂತಹ ಜನರು ಬಾಳೆಹಣ್ಣಿನ ಸೇವನೆಯ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.

VIEW ALL

Read Next Story