ಅರಿಶಿಣ ಹಾಕಿ ತುಪ್ಪ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ.
ಅರಿಶಿಣ ಹಾಕಿದ ಒಂದು ಚಮಚ ತುಪ್ಪ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.
ತುಪ್ಪದಲ್ಲಿ ವಿಟಮಿನ್ ‘ಎ’ ಇರುವುದರಿಂದ ಕಫ ಸಮಸ್ಯೆ ತಡೆಗಟ್ಟಲು ಸಹಕಾರಿ.
ಅರಿಶಿಣದಲ್ಲಿ ಬ್ಯಾಕ್ಟಿರಿಯಾ, ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿದ್ದು, ಶೀತ-ಕೆಮ್ಮು ತಡೆಗಟ್ಟಲು ಸಹಕಾರಿ.
ತುಪ್ಪದ ಜೊತೆಗೆ ಅರಿಶಿನ ಸೇವಿಸಿದರೆ ಮೂಳೆಗಳ ಆರೋಗ್ಯಕ್ಕೆ, ಉರಿಯೂತ ಕಡಿಮೆ ಮಾಡಲು ಸಹಕಾರಿ.
ಅರಿಶಿಣ ಹಾಕಿದ ತುಪ್ಪ ತಿನ್ನುವುದರಿಂದ ನರಗಳಿಗೆ ವಿಶ್ರಾಂತಿ ದೊರೆತು ಕಣ್ತುಂಬ ನಿದ್ದೆ ಬರುತ್ತದೆ.
ನಿದ್ರಾಹೀನತೆ ಸಮಸ್ಯೆಯಿದ್ದರೆ ಅರಿಶಿಣ ಹಾಕಿದ ತುಪ್ಪವನ್ನು ಮಲಗುವ ಮುಂಚೆ ಸೇವಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ.
ಮಲಬದ್ಧತೆ ಸಮಸ್ಯೆ ಇರುವವರು ತುಪ್ಪ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿ.