ಕಿತ್ತಳೆ ಹಣ್ಣಿನಲ್ಲಿರುವ ಡಿ – ಲಿಮೋನೆನ್ ಎಂಬ ಸಂಯುಕ್ತ ಶ್ವಾಸಕೋಶದ ಅಂಶವು ನಿಮ್ಮನ್ನು ಕ್ಯಾನ್ಸರ್, ಸ್ತನ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ಮುಂತಾದ ವಿವಿಧ ರೀತಿಯ ಕ್ಯಾನ್ಸರ್ ಕಾಯಿಲೆಗಳನ್ನು ತಡೆಯುತ್ತದೆ.
ಕಿತ್ತಳೆ ಹಣ್ಣಿನಲ್ಲಿರುವ ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುವುದಲ್ಲದೆ, ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಸಿಟ್ರಸ್ ಹಣ್ಣುಗಳಲ್ಲಿ ಒಂದಾಗಿರುವ ಕಿತ್ತಳೆ ಹಣ್ಣು ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಕಿತ್ತಳೆ ಹಣ್ಣಿನ ಸಿಹಿ ಹುಳಿ ಮಿಶ್ರಣವು ಹೆಚ್ಚಿನ ಜನರಿಗೆ ಇಷ್ಟವಾಗುತ್ತದೆ.
ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಧಿಕವಿದ್ದು, ಪ್ರತಿದಿನ ಬೆಳಗ್ಗೆ ಕಿತ್ತಳೆ ಹಣ್ಣಿನ ಒಂದು ಗ್ಲಾಸ್ ಜ್ಯೂಸ್ ಕುಡಿಯಬೇಕಂತೆ. ಕಿತ್ತಳೆ ಜ್ಯೂಸ್ ಕುಡಿಯೋದಕ್ಕಿಂತ ಕಿತ್ತಳೆಯನ್ನು ಹಾಗೇ ತಿಂದರೇ ಇನ್ನೂ ಒಳ್ಳೆಯದು.
ಕಿತ್ತಳೆ ಹಣ್ಣಿನಲ್ಲಿ ಕ್ಯಾಲೋರಿಗಳು, ವಿಟಮಿನ್ ಸಿ, ಕಾರ್ಬೋಹೈಡ್ರೇಟ್ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಇವೆ.
ಒಂದು ಲೋಟ ಕಿತ್ತಳೆ ಹಣ್ಣಿನ ಜ್ಯೂಸ್ ಕುಡಿದ್ರೆ ಅನೇಕ ಪೋಷಕಾಂಶಗಳು ನಿಮ್ಮ ದೇಹಕ್ಕೆ ಸಿಗುತ್ತದೆ. ಹಲವಾರು ಗುಣಗಳಿಂದ ಸಮೃದ್ಧವಾಗಿರುವ ಕಿತ್ತಳೆ ರಸದಿಂದ ನಿಮಗೆ ಅನೇಕ ಪ್ರಯೋಜನಗಳಿವೆ.
ನೀವು ದೀರ್ಘಕಾಲ ಕಿತ್ತಳೆ ರಸ ಸೇವಿಸಿದರೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಿತ್ತಳೆಯಲ್ಲಿ ಸಾಕಷ್ಟು ಫೈಬರ್ ಕಂಡುಬರುತ್ತದೆ, ಇದರ ಸಹಾಯದಿಂದ ಕೊಲೆಸ್ಟ್ರಾಲ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕಿತ್ತಳೆಗಳು ಕ್ಯಾರೋಟಿನ್ ಮತ್ತು ವಿಟಮಿನ್ ಎರಡನ್ನೂ ಒಳಗೊಂಡಿರುತ್ತವೆ. ಇದು ಕಣ್ಣಿನ ದೃಷ್ಟಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ವಿಟಮಿನ್ ಕಾರ್ನಿಯಾವನ್ನು ರಕ್ಷಿಸುತ್ತದೆ.