ಶೇಂಗಾ ಬೀಜಗಳು ಹಲವು ರೀತಿಯಲ್ಲಿ ಆರೋಗ್ಯಕರವಾಗಿವೆ. ಇದರ ಪ್ರಯೋಜನ ಪಡೆಯಲು ಪ್ರತಿ 2-3 ದಿನಕ್ಕೊಮ್ಮೆ 10-15 ಬೀಜಗಳನ್ನು ಸೇವಿಸಿದರೂ ಸಾಕಾಗುತ್ತದೆ.
ಶೇಂಗಾ ಬೀಜಗಳು ಹೃದ್ರೋಗ ಎದುರಾಗುವ ಅಪಾಯ ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.
ಶೇಂಗಾ ಬೀಜಗಳನ್ನು ಸೇವಿಸುವ ಮೂಲಕ ತೂಕ ಇಳಿಸಿಕೊಳ್ಳಲು ಮತ್ತು ಇಳಿಸಿದ ತೂಕವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ.
ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಿಸಲು ಶೇಂಗಾಬೀಜವನ್ನು ತಿನ್ನುವುದು ಉತ್ತಮ. ವಾರದಲ್ಲಿ 2 ಬಾರಿ ಬೆಳಗ್ಗೆ ಶೇಂಗಾ ಬೀಜವನ್ನು ಸೇವಿಸಿರಿ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡಲು ನೆರವಾಗುತ್ತದೆ.
ಮಧುಮೇಹಿಗಳಿಗೆ ರಕ್ತದ ಸಕ್ಕರೆ ಮಟ್ಟ ಏರಿಸುವ ಯಾವುದೇ ಆಹಾರ ಸೂಕ್ತವಲ್ಲ. ಇದೇ ಕಾರಣಕ್ಕೆ ಸಕ್ಕರೆ ತಿನ್ನಬಾರದೆಂದು ಹೇಳಲಾಗುತ್ತದೆ. ಮಧುಮೇಹಿಗಳು ಅಲ್ಪ ಪ್ರಮಾಣದ ಸಕ್ಕರೆ ಸೇವಿಸಬಹುದು, ಹೀಗಾಗಿ ಸ್ವಲ್ಪ ಶೇಂಗಾ ಬೀಜಗಳನ್ನು ಸೇವಿಸಿದರೆ ಏನೂ ತೊಂದರೆಯಿಲ್ಲ.
ಶೇಂಗಾ ಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಪ್ರೋಟೀನ್, ಶಕ್ತಿ ಮತ್ತು ಕಬ್ಬಿಣದ ಅಂಶವಿದೆ. ಅರಾಚಿನ್ ಮತ್ತು ಕೊನರಾಚಿನ್ ಪ್ರೋಟೀನ್ಗಳು ಶೇಂಗಾಬೀಜದ ಪೌಷ್ಠಿಕ ಮೌಲ್ಯವನ್ನು ಹೆಚ್ಚಿಸುತ್ತವೆ.
ಶೇಂಗಾ ಬೀಜಗಳಲ್ಲಿ ಕಾರ್ಬೋಹೈಡ್ರೇಟುಗಳು, ಕರಗದ ನಾರು ಮತ್ತು ಕೊಬ್ಬುಗಳ ಉತ್ತಮ ಮೂಲವಾಗಿದೆ.