ದಿನಕ್ಕೆ 2 ಲವಂಗ ಸೇವಿಸಿದ್ರೆ ನೀವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ.ಆಯುರ್ವೇದ ಸಹ ದಿನಕ್ಕೆರಡು ಲವಂಗ ಸೇವಿಸುವಂತೆ ಸಲಹೆ ನೀಡಿದೆ.
ಲವಂಗದಲ್ಲಿರುವ ರೋಗನಿರೋಧಕ ಗುಣದಿಂದ ನಾವು ಸೇವಿಸಬಹುದಾದ ಅತ್ಯುತ್ತಮ ಆಹಾರಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಇದು ದೇಹದಲ್ಲಿನ ಬಿಳಿ ರಕ್ತ ಕಣಗಳ ಪ್ರಮಾಣ ಹೆಚ್ಚಿಸುತ್ತದೆ.
ಲವಂಗದಲ್ಲಿರುವ ಪೋಷಕಾಂಶಗಳು ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಗೆ ಉತ್ತೇಜನ ನೀಡುತ್ತದೆ. ಇದರಿಂದ ಜೀರ್ಣಕ್ರಿಯೆ ಸಮಸ್ಯೆ ಮತ್ತು ಮಲಬದ್ದತೆಯಿಂದ ಮುಕ್ತಿ ಸಿಗುತ್ತದೆ.
ಈ ಮಸಾಲೆಯಲ್ಲಿ ಅರಿವಳಿಕೆ ಗುಣಗಳಿವೆ. ನಿಮಗೆ ಹಲ್ಲುನೋವಿದ್ದರೆ, ನೋವಿನ ಭಾಗದ ಮೇಲೆ ಲವಂಗದ ಎಣ್ಣೆಯಲ್ಲಿ ಅದ್ದಿರುವ ಹತ್ತಿಯುಂಡೆ ಇರಿಸಬೇಕು.
ಲವಂಗದಲ್ಲಿರುವ ಯೂಜಿನಾಲ್ ಎಂಬ ಪೋಷಕಾಂಶ ಯಕೃತ್ ಸ್ನೇಹಿ ಗುಣಗಳನ್ನು ಹೊಂದಿದ್ದು, ಯಕೃತ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಲವಂಗದಲ್ಲಿರುವ ಯುಜೆನಾಲ್ ನೋವು ನಿವಾರಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ವಿಶೇಷವಾಗಿ ತಲೆನೋವನ್ನು ಗುಣಪಡಿಸಲು ಇದು ಹೆಚ್ಚು ಬಳಕೆಯಾಗುತ್ತದೆ.
ಲವಂಗದಲ್ಲಿ ಮೂಳೆ ಮತ್ತು ಮೂಳೆಸಂಧುಗಳ ಆರೋಗ್ಯವನ್ನು ಉತ್ತೇಜಿಸುವ ಫ್ಲೇವನಾಯ್ಡುಗಳು, ಮ್ಯಾಂಗನೀಸ್ ಮತ್ತು ಯುಜೆನಾಲ್ ನಂತಹ ಹಲವಾರು ಪೋಷಕಾಂಶಗಳಿವೆ.
ಮಧುಮೇಹದ ಸಮಸ್ಯೆ ಇರುವವರಿಗೆ ಲವಂಗ ಸೂಕ್ತವಾಗಿದೆ, ಏಕೆಂದರೆ ಇದು ದೇಹದೊಳಗಿನ ಇನ್ಸುಲಿನ್ ನಂತೆ ಕಾರ್ಯನಿರ್ವಹಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ನೆರವಾಗುತ್ತದೆ.