ಹಲವಾರು ಆರೋಗ್ಯ ಪ್ರಯೋಜನ

ನಿಯಮಿತವಾಗಿ ಹುರುಳಿ ಕಾಳುಗಳ ಸೇವನೆಯಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯುತ್ತೀರಿ.

Puttaraj K Alur
Mar 26,2023

ಕ್ಯಾಲ್ಸಿಯಂ, ಸತು, ಕಾರ್ಬೋಹೈಡ್ರೇಟ್ & ಜೀವಸತ್ವಗಳು

ಹುರುಳಿ ಕಾಳುಗಳಲ್ಲಿ ಪ್ರೋಟೀನ್, ಕಬ್ಬಿಣ, ಕ್ಯಾಲ್ಸಿಯಂ, ಸತು, ಕಾರ್ಬೋಹೈಡ್ರೇಟ್, ಜೀವಸತ್ವಗಳು, ಉತ್ಕರ್ಷಣ ನಿರೋಧಕ ಮತ್ತು ಕರಗುವ ಫೈಬರ್ ಸಮೃದ್ಧವಾಗಿದೆ.

ಪ್ರೋಟೀನ್ ಸಮೃದ್ಧ & ಕ್ಯಾಲ್ಸಿಯಂ ಅಧಿಕ

ಹುರುಳಿಕಾಳಿನಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಕ್ಯಾಲ್ಸಿಯಂ ಅಧಿಕವಾಗಿದೆ, ಕಡಿಮೆ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ.

ಕೊಲೆಸ್ಟ್ರಾಲ್ & ರಕ್ತದ ಸಕ್ಕರೆ ಮಟ್ಟ

ಹುರುಳಿ ಕಾಳುಗಳು ದೇಹದ ಕೆಟ್ಟ ಕೊಲೆಸ್ಟ್ರಾಲ್, ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಮೂತ್ರದ ಸಮಸ್ಯೆ

ಹುರುಳಿ ಕಾಳುಗಳನ್ನು ಸೂಪ್ ರೂಪದಲ್ಲಿ ಸೇವಿಸಿದರೆ ಮೂತ್ರದ ಸಮಸ್ಯೆಯಿಂದ ಮುಕ್ತಿ ದೊರೆಯುತ್ತದೆ.

ಹೃದಯದ ಆರೋಗ್ಯ

ಹುರುಳಿ ಕಾಳುಗಳ ಸೇವನೆಯು ಹೃದಯದ ಆರೋಗ್ಯಕ್ಕೂ ತುಂಬಾ ಉತ್ತಮ.

ಹಲವು ಕಾಯಿಲೆಗಳಿಗೆ ರಾಮಬಾಣ

ಹುರುಳಿಕಾಳು ಮಧುಮೇಹ, ಹೃದ್ರೋಗ, ಮೂತ್ರಪಿಂಡದ ಕಲ್ಲುಗಳು, ಅಸ್ತಮಾ, ಬೊಜ್ಜು, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣ.

ತೂಕ ನಷ್ಟ & ಮಧುಮೇಹ

ಹುರುಳಿ ಕಾಳುಗಳು ತೂಕ ನಷ್ಟಕ್ಕೆ, ಮಧುಮೇಹ ಅಥವಾ ಡಯಾಬಿಟಿಸ್ ನಿಯಂತ್ರಣಕ್ಕೆ ಮತ್ತು ವೀರ್ಯಾಣುಗಳ ಸಂಖ್ಯೆ ಹೆಚ್ಚಿಸಲು ಸಹಕಾರಿ.

VIEW ALL

Read Next Story