ಪಾಲಕ್ ಸೊಪ್ಪು ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ವಿಟಮಿನ್ ಕೆ, ಎ, ಇ ಮತ್ತು ಸಿ ಉತ್ತಮ ಮೂಲವಾಗಿದೆ. ರಕ್ತ ಉತ್ಪಾದನೆಗೆ ಕಬ್ಬಿಣವು ಅತ್ಯಗತ್ಯ ಅಂಶವಾಗಿದೆ.
ಕೂದಲಿನ ಬೆಳವಣಿಗೆಗೆ ಪಾಲಕ್ ಸೊಪ್ಪು ಬಹಳ ಸಹಕಾರಿ. ವಿಟಮಿನ್ ಹಾಗೂ ಪ್ರೊಟೀನ್ ಅಂಶಗಳು ಪಾಲಕ್ ಸೊಪ್ಪಿನಲ್ಲಿ ಹೇರಳವಾಗಿರುವುದರಿಂದ ಕೂದಲು ಉದುವಿಕೆಯನ್ನು ತಡೆದು ನೈಸರ್ಗಿಕ ಕಾಂತಿ ನೀಡುತ್ತದೆ.
ಪಾಲಕ್ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಮುಖದ ಮೇಲಿನ ಮೊಡವೆಗಳು ಮಾಯವಾಗಿ ನೆರಿಗೆ ಕಡಿಮೆಯಾಗುತ್ತದೆ.
ನರ ದೌರ್ಬಲ್ಯವಿದ್ದವರು ಪಾಲಕ್ ಸೊಪ್ಪನ್ನು ತಿನ್ನುವುದರಿಂದ ಸಮಸ್ಯೆ ಶೀಘ್ರವೇ ನಿವಾರಣೆಯಾಗುತ್ತದೆ.
ಪಾಲಕ್ ಸೊಪ್ಪು ಕ್ಯಾನ್ಸರ್ ರೋಗಿಗಳಿಗೆ ಅದ್ಭುತ ಔಷಧ. ಕ್ಯಾನ್ಸರ್ ಕಣಗಳನ್ನು ಕೊಲ್ಲವ ಶಕ್ತಿ ಈ ಪಾಲಕ್ ಸೊಪ್ಪಿನಲ್ಲಿದೆ.
ಬೊಜ್ಜು ಕಡಿಮೆ ಮಾಡಿಕೊಳ್ಳಲು ಪಾಲಕ್ ಸೊಪ್ಪು ಸಹಕಾರಿ. ಇದರಲ್ಲಿರುವ ‘ಕ್ಯಾರೋಟಿನೈಡ್’ ಅಂಶವು ದೇಹದಲ್ಲಿರುವ ಕೊಲೆಸ್ಟ್ರಾಲ್ ಕರಗಿಸಿ, ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ.
ಮಕ್ಕಳಲ್ಲಿ ಅಥವಾ ವೃದ್ಧರಲ್ಲಿ ನೆನಪಿನ ಶಕ್ತಿ ಸಮಸ್ಯೆಯಿದ್ದರೆ ಪಾಲಕ್ ಸೊಪ್ಪು ಸೇವಿಸಬೇಕು. ಇದರಿಂದ ಮೆದುಳಿನ ನರಕೋಶಗಳ ವೃದ್ಧಿಯಾಗಿ ನೆನಪಿನ ಶಕ್ತಿ ಹೆಚ್ಚುತ್ತದೆ.
ದಿನನಿತ್ಯ ಪಾಲಕ್ ಸೊಪ್ಪಿನ ಜ್ಯೂಸ್ ಸೇವಿಸುವುದರಿಂದ ರಕ್ತಹಿನತೆಯ ಸಮಸ್ಯೆ ನಿವಾರಣೆಯಾಗುತ್ತದೆ.