ಮೊಳಕೆ ಕಾಳು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಉತ್ತಮ ಆರೋಗ್ಯಕ್ಕಾಗಿ ಮೊಳಕೆ ಕಾಳು ಬಹು ಮುಖ್ಯ.
ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಮೊಳಕೆ ಕಾಳು ಬೆಳಗಿನ ಉಪಹಾರಕ್ಕೆ ತುಂಬಾ ಒಳ್ಳೆಯದು.
ಹೆಚ್ಚಿನ ಪ್ರಮಾಣದ ನಾರು, ಪ್ರೊಟೀನ್ ಒಳಗೊಂಡಿರುವ ಮೊಳಕೆ ಕಾಳಿನಲ್ಲಿ ಕ್ಯಾಲೋರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿರುತ್ತದೆ.
ಮೊಳಕೆ ಕಾಳಿನ ಜೊತೆಗೆ ಹಸಿ ಕ್ಯಾರೆಟ್, ಸೌತೆಕಾಯಿ, ದಾಳಿಂಬೆ ಕಾಳು, ನಿಂಬೆರಸ ಮತ್ತು ಸ್ವಲ್ಪ ಉಪ್ಪು ಹಾಕಿ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ.
ಮೊಳಕೆ ಕಾಳು ಸೇವನೆಯು ಪಚನಕ್ರಿಯೆ ಸರಳಗೊಳಿಸುವುದರ ಜೊತೆಗೆ ದೇಹದ ತೂಕ ಇಳಿಸುತ್ತದೆ.
ಮೊಳಕೆ ಕಾಳಿನಿಂದ ಮಾಡಿದ ತಿಂಡಿಯನ್ನು ಸ್ವಲ್ಪ ತಿಂದರೂ ಹೊಟ್ಟೆ ತುಂಬಿದಂತಾಗಿ ಬೇಗ ಹಸಿವಾಗುವುದಿಲ್ಲ.
ಮೊಳಕೆ ಕಾಳು ಕೊಲೆಸ್ಟ್ರಾಲ್ ಕಡಿಮೆಗೊಳಿಸುವ, ಚರ್ಮದ ಕಾಂತಿ ಹೆಚ್ಚಿಸುವ, ಮೂಳೆಗಳನ್ನು ಗಟ್ಟಿಗೊಳಿಸುವ ಗುಣಗಳಿವೆ.