ಸನಾತನ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗದ್ದು, ಹೀಗಾಗಿಯೇ ಮನೆಗಳಲ್ಲಿ ತುಳಸಿ ಗಿಡ ನೆಡಲಾಗುತ್ತದೆ.
ತುಳಸಿ ಗಿಡದ ಆಯುರ್ವೇದದ ಗುಣಲಕ್ಷಣಗಳಿಂದ ಈ ಸಸ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತುಳಸಿ ಕಷಾಯ ಸೇವಿಸಿದ್ರೆ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ಪ್ರತಿದಿನ 1 ಲೋಟ ನೀರಿಗೆ 4 ತುಳಸಿ ಎಲೆ ಹಾಕಿಕೊಂಡು ಕುದಿಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
ಬೆಳಗ್ಗೆ ಎದ್ದ ಕೂಡಲೇ ತುಳಸಿ ನೀರು ಕುಡಿದರೆ ದೇಹ ನಿರ್ವಿಷವಾಗಲಿದ್ದು, ದೇಹದಲ್ಲಿರುವ ವಿಷಕಾರಿ ಅಂಶ ಹೊರಬರುತ್ತದೆ.
ತುಳಸಿಯಲ್ಲಿ ಕಂಡುಬರುವ ಆಂಟಿಆಕ್ಸಿಡೆಂಟ್ಗಳು ಸ್ವತಂತ್ರ ರಾಡಿಕಲ್ಗಳ ಪರಿಣಾಮ ಕಡಿಮೆಗೊಳಿಸಿ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ತುಳಸಿ ನೀರನ್ನು ಕುಡಿದರೆ ಶೀತ, ಕೆಮ್ಮು ಮತ್ತು ಜ್ವರದ ಅಪಾಯ ಕಡಿಮೆಯಾಗುತ್ತದೆ.
ತುಳಸಿಯನ್ನು ಮಾನಸಿಕ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.