ಬೇಸಿಗೆಯಲ್ಲಿ ದಿನವಿಡೀ ಫ್ರೆಶ್ ಆಗಿರಲು ನೀವು ಪುದೀನ್ ಜ್ಯೂಸ್ ಕುಡಿಯಬೇಕು.
ಪುದೀನಾ ಪೋಷಕಾಂಶಗಳ ಕಣಜವಾಗಿದ್ದು, ಇದರಲ್ಲಿ ಕಬ್ಬಿಣ, ಪೊಟ್ಯಾಶಿಯಂ, ಮ್ಯಾಂಗನೀಸ್ ಹೇರಳವಾಗಿವೆ.
ಪುದೀನಾ ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚಿಸುತ್ತದೆ ಮತ್ತು ಮೆದುಳಿನ ಚಟುವಟಿಕೆಗಳನ್ನು ಚುರುಕುಗೊಳಿಸುತ್ತದೆ.
ಪುದೀನಾದಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಜೀರ್ಣಕ್ರಿಯೆ ಚುರುಕುಗೊಳಿಸುತ್ತವೆ ಮತ್ತು ಸೋಂಕು ಸಂಬಂಧಿ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತವೆ.
ಪುದೀನಾ ಜ್ಯೂಸ್ ಸೇವಿಸುವುದರಿಂದ ತಲೆನೋವು ಮತ್ತು ಮತ್ತು ಮಾನಸಿಕ ಖಿನ್ನತೆಯಿಂದ ಮುಕ್ತಿ ದೊರೆಯುತ್ತದೆ.
ನಿಯಮಿತವಾಗಿ ಪುದೀನಾ ಸೇವಿಸುವುದರಿಂದ ಉಸಿರಾಟದ ಸಮಸ್ಯೆಯಿಂದ ದೂರವಿರಬಹುದು.
ಪುದೀನಾ ಹೊಟ್ಟೆ ಸಂಬಂಧಿ ಸಮಸ್ಯೆ ನಿವಾರಿಸಿ ಬ್ಯಾಕ್ಟೀರಿಯಾ ಹರಡದಂತೆ ನೋಡಿಕೊಳ್ಳುತ್ತದೆ.