ಆಯುರ್ವೇದಲ್ಲಿ ಬಹಳ ಮಹತ್ವ ಪಡೆದುಕೊಂಡಿರುವ ಬೇವು ಹಲವಾರು ಔಷಧೀಯ ಗುಣಗಳನ್ನು ಹೊಂದಿವೆ.
ಬೇವಿನ ಗಿಡ, ಎಲೆ, ತೊಗಟೆ, ಬೀಜ ಎಲ್ಲವೂ ಔಷಧ ಗುಣಗಳನ್ನು ಹೊಂದಿವೆ.
ಗುಣದಲ್ಲಿ ಕಹಿಯಿದ್ದರೂ ಸರ್ವರೋಗಕ್ಕೂ ಬೇವಿನ ಎಲೆಗಳು ಕಲ್ಪವೃಕ್ಷವಾಗಿವೆ.
ಬೇವಿನ ಎಲೆಗಳು ಉತ್ತಮ ರಕ್ತವನ್ನು ಶುದ್ಧೀಕರಿಸುವ ಗುಣವನ್ನು ಹೊಂದಿವೆ.
ತಲೆ ಹೊಟ್ಟಿನ ಸಮಸ್ಯೆಗೆ ತಲೆಗೆ ಬೇವಿನ ಎಲೆಗಳ ಪೇಸ್ಟ್ ತಯಾರಿಸಿ ಹಚ್ಚಿಕೊಳ್ಳಬೇಕು.
ಹೊಳೆಯುವ ಚರ್ಮದ ಕಾಂತಿಗೆ ಬೇವಿನ ಎಲೆ ತುಂಬಾ ಮುಖ್ಯವಾಗಿದೆ.
ಬೇವಿನ ಎಲೆಗಳನ್ನು ಸೌಂದರ್ಯ ವರ್ಧಕವಾಗಿದ್ದು, ಚರ್ಮದ ಸಮಸ್ಯೆಗಳಿಗೆ ನೈಸರ್ಗಿಕ ಔಷಧಿ.
ಬೇವಿನ ಎಲೆಗಳು ಶಿಲೀಂಧ್ರನಾಶಕ ಗುಣ ಹೊಂದಿದ್ದು, ಇದು ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಬೇವಿನ ಎಲೆಯನ್ನು ಹಲವು ಟೂತ್ ಪೇಸ್ಟ್ ಗಳಲ್ಲಿ ಮತ್ತು ಮೌತ್ ವಾಶ್‌ಗಳಲ್ಲಿ ಬಳಸಲಾಗುತ್ತದೆ.