ಬಾದಾಮಿಯಲ್ಲಿ ಅದ್ಭುತ ಆರೋಗ್ಯಕರ ಪ್ರಯೋಜನಗಳಿವೆ. ಉತ್ತಮ ಹೃದಯದ ಆರೋಗ್ಯಕ್ಕೂ ಬಾದಾಮಿಗೂ ನಿಕಟ ಸಂಬಂಧವಿರುವುದನ್ನು ಸಂಶೋಧನೆಗಳು ಸಾಬೀತು ಮಾಡಿವೆ.
ಮಧುಮೇಹಿಗಳೂ ಬಾದಾಮಿಯನ್ನು ಸುರಕ್ಷಿತವಾಗಿ ಸೇವಿಸಬಹುದು. ಒಣ ಬಾದಾಮಿಯ ಸೇವನೆಗಿಂತಲೂ ರಾತ್ರಿ ನೆನೆಸಿಟ್ಟು ಬೆಳಗ್ಗೆ ತಿನ್ನುವುದು ಅತ್ಯುತ್ತಮ. ನೆನೆಸಿಟ್ಟ ಬಾದಾಮಿ ಸೇವನೆಯಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ.
ಬಾದಾಮಿಯಲ್ಲಿ ಹಲವಾರು ಅಗತ್ಯ ಪೋಷಕಾಂಶಗಳಿವೆ. ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್, ವಿಟಮಿನ್ ಇ, ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ.
ಬಾದಾಮಿ ಒಣದಾಗಿದ್ದಾಗ ಸೇವಿಸುವುದಕ್ಕಿಂತ ನೆನೆಸಿಟ್ಟು ಸೇವಿಸಿದಾಗ ಜೀರ್ಣಿಸಿಕೊಳ್ಳುವುದು ಸುಲಭ. ನೆನೆಸಿಟ್ಟ ಬಾದಾಮಿ ಜೀರ್ಣಕ್ರಿಯೆ ಉತ್ತೇಜಿಸುತ್ತದೆ. ಈ ಪೋಷಕಾಂಶಗಳು ಜೀರ್ಣಕ್ರಿಯೆ ಉತ್ತೇಜಿಸುವ ಕಿಣ್ವಗಳ ಉತ್ಪಾದನೆಗೆ ಪ್ರಚೋದನೆ ನೀಡುತ್ತವೆ. ಪರಿಣಾಮ ಜೀರ್ಣಕ್ರಿಯೆ ಸುಲಭವಾಗುತ್ತದೆ.
ಬಾದಾಮಿಗಳಲ್ಲಿ ವಿಟಮಿನ್ E ಸಮೃದ್ಧ ಪ್ರಮಾಣದಲ್ಲಿದೆ. ಈ ವಿಟಮಿನ್ E ನಮ್ಮ ಚರ್ಮ ಮತ್ತು ಕೂದಲಿನ ಪೋಷಣೆಗೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ. ಬಾದಾಮಿಯಲ್ಲಿರುವ ವಿಟಮಿನ್ E ನಿಮ್ಮ ಚರ್ಮವನ್ನು ನಯವಾಗಿ ಮತ್ತು ಸೊಂಪಾಗಿಸಲು ನೆರವಾಗುತ್ತದೆ.
ಬಾದಾಮಿಯ ಗುಣಗಳಲ್ಲಿ ಅತ್ಯುತ್ತಮ ಪ್ರಯೋಜನವೆಂದರೆ ಮೆದುಳಿನ ಕ್ಷಮತೆ ಹೆಚ್ಚಿಸುವುದು. ಅಧ್ಯಯನಗಳಲ್ಲಿ ನಿತ್ಯವೂ ಬೆಳಗ್ಗಿನ ಆಹಾರವಾಗಿ ಬಾದಾಮಿ ಸೇವಿಸುವ ವ್ಯಕ್ತಿಗಳ ಮೆದುಳಿನ ಕ್ಷಮತೆ ಉಳಿದವರಿಗಿಂತ ಹೆಚ್ಚಿರುತ್ತದೆ ಎಂದು ತಿಳಿಸಿವೆ.
ನಮ್ಮ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಬೇಕೇ ಬೇಕು. ಆದರೆ ಇದರಲ್ಲಿ ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಗಳೆಂಬ ಎರಡು ಬಗೆ ಗಳಿರುತ್ತವೆ. ಇವೆರಡೂ ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್ ಎಂಬ ಇನ್ನೊಂದು ಬಗೆಯ ಕೊಬ್ಬುಗಳು ಒಂದು ಅನುಪಾತದಲ್ಲಿದ್ದಾಗಲೇ ಉತ್ತಮ ಅರೋಗ್ಯ ಪಡೆಯಲು ಸಾಧ್ಯ.
ಪ್ರತಿದಿನ ಬಾದಾಮಿ ತಿನ್ನುವುದು ಪುರುಷರಿಗೆ ಪ್ರಯೋಜನಕಾರಿ. ಪ್ರೋಟೀನ್ ಮತ್ತು ಫೈಬರ್ನ ಸಮೃದ್ಧ ಮೂಲವಾಗಿರುವ ಬಾದಾಮಿ ಪುರುಷರ ಲೈಂಗಿಕ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.