ರಕ್ತಹೀನತೆಯ ತೊಂದರೆಯಿಂದ ದೇಹದಲ್ಲಿ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಮಹಿಳೆಯರು ಮತ್ತು ಮಕ್ಕಳಲ್ಲಿ ರಕ್ತಹೀನತೆ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತದೆ.
ದೇಹದಲ್ಲಿ ರಕ್ತಹೀನತೆ ಸಮಸ್ಯೆ ಕಾಣಿಸಿಕೊಂಡರೆ ಹಿಮೋಗ್ಲೋಬಿನ್ ಮಟ್ಟವು ಕುಸಿಯುತ್ತದೆ.
ವಿಟಮಿನ್ ‘C' ಸಮೃದ್ಧವಾಗಿರುವ ನೆಲ್ಲಿಕಾಯಿಗಳು ರಕ್ತಹೀನತೆ ಸಮಸ್ಯೆಗೆ ಪ್ರಮುಖ ಆಹಾರವಾಗಿದೆ.
ಪ್ರತಿನಿತ್ಯ ಸೇಬು ಹಣ್ಣು ತಿನ್ನುವುದರಿಂದ ರಕ್ತಹೀನತೆ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ.
ಪಾಲಕ್ ಸೊಪ್ಪಿನಲ್ಲಿ ಕಬ್ಬಿಣದ ಅಂಶ ಸೇರಿದಂತೆ ಅನೇಕ ಅಗತ್ಯ ಪೋಷಕಾಂಶಗಳು ಕಂಡುಬರುತ್ತವೆ. ಇದರಿಂದ ರಕ್ತಹೀನತೆ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
ಬೇಳೆಕಾಳುಗಳನ್ನು ಸೇವಿಸುವುದರಿಂದ ದೇಹಕ್ಕೆ ಕಬ್ಬಿಣದ ಜೊತೆಗೆ ಪ್ರೋಟೀನ್ ಮತ್ತು ಫೈಬರ್ ಸಿಗುತ್ತದೆ. ಬೇಳೆಕಾಳು ರಕ್ತಹೀನತೆಯಿಂದ ಮುಕ್ತಿ ನೀಡುತ್ತದೆ.
ಕಬ್ಬಿಣ, ಮೆಗ್ನೀಸಿಯಮ್ ಮತ್ತು ಸತು ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಕುಂಬಳಕಾಯಿ ಬೀಜಗಳು ರಕ್ತಹೀನತೆಗೆ ರಾಮಬಾಣ.