ಹಲವಾರು ಪದಾರ್ಥಗಳನ್ನು ಬೇಯಿಸಿ ತಿನ್ನುವುದರಿಂದ ಆರೋಗ್ಯಕ್ಕೆ ಸಮಸ್ಯೆಗಳಾಗುತ್ತವೆ.
ಕೆಲವೊಂದು ಆಹಾರಗಳನ್ನು ಅಪ್ಪಿತಪ್ಪಿಯೂ ಬೇಯಿಸಿ ಸೇವಿಸಬಾರದು. ಈ ಆಹಾರಗಳ ಮಾಹಿತಿ ಇಲ್ಲಿದೆ ನೋಡಿ.
ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುವ ರೆಡ್ ಕ್ಯಾಪ್ಸಿಕಂ ಅನ್ನು ಬೇಯಿಸಿ ತಿನ್ನಬಾರದು. ಇದನ್ನು ಬೇಯಿಸಿ ತಿಂದರೆ ಪೌಷ್ಟಿಕಾಂಶಗಳು ನಾಶವಾಗುತ್ತವೆ.
ಡ್ರೈ ಫ್ರೂಟ್ಗಳನ್ನು ಬೇಯಿಸುವುದರಿಂದ ಅವುಗಳಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತವೆ. ಬೇಯಿಸಿದ ಡ್ರೈಫ್ರೂಟ್ಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬಹಳಷ್ಟು ಪೌಷ್ಟಿಕಾಂಶಗಳನ್ನು ಹೊಂದಿರುವ ಬ್ರೊಕೊಲಿಯನ್ನು ಬೇಯಿಸಿದರೆ ಅದರಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತವೆ.
ಆಲಿವ್ ಎಣ್ಣೆಯನ್ನು ಎಂದಿಗೂ ಕುದಿಸಬಾರದು. ಬಿಸಿ ಮಾಡಿದರೆ ಅದರ ಪೌಷ್ಟಿಕಾಂಶಗಳು ನಾಶವಾಗುತ್ತವೆ.
ಸೌತೆಕಾಯಿಯನ್ನು ಯಾವಾಗಲೂ ಹಸಿಯಾಗಿಯೇ ಸೇವಿಸಬೇಕು. ಏಕೆಂದರೆ ಬೇಯಿಸಿದ ಸೌತೆಕಾಯಿಯನ್ನು ತಿನ್ನುವುದು ಹಾನಿಯನ್ನುಂಟುಮಾಡುತ್ತದೆ.