ಇಂದು ಹೃದಯಾಘಾತ ಸಾಮಾನ್ಯವಾಗಿಬಿಟ್ಟಿದೆ. ಯುವಕರು ಸಹ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ.
ಹಿಂದೆ ವಯಸ್ಸಾದವರಲ್ಲಿ ಕಂಡುಬರುತ್ತಿದ್ದ ಹೃದಯಾಘಾತ ಇಂದು ಚಿಕ್ಕಮಕ್ಕಳಿಗೂ ಬರುತ್ತಿದೆ. ಆರೋಗ್ಯವಂತರೂ ಸಹ ಇದಕ್ಕೆ ಬಲಿಯಾಗುತ್ತಿದ್ದಾರೆ.
ಹೃದಯಾಘಾತದ ಲಕ್ಷಗಳ ಪೈಕಿ ಎದೆ ನೋವು, ಒತ್ತಡ, ಬಿಗಿತ, ನೋವು ಕಂಡುಬರುತ್ತದೆ.
ಭುಜ, ತೋಳು, ಬೆನ್ನು, ಕುತ್ತಿಗೆ, ದವಡೆ, ಹಲ್ಲುಗಳು ಅಥವಾ ಕೆಲವೊಮ್ಮೆ ಹೊಟ್ಟೆಯ ಮೇಲ್ಭಾಗದಲ್ಲಿ ನೋವು ಅಥವಾ ಅಸ್ವಸ್ಥತೆ ಕಾಡಬಹುದು.
ಹೃದಯಾಘಾತದ ಲಕ್ಷಗಳಲ್ಲಿ ತಣ್ಣನೆಯ ಬೆವರು ಕೂಡ ಕಂಡುಬರಬಹದು.
ನಿಯಂತರ ಆಯಾಸವೂ ಕೂಡ ಹೃದಯಾಘಾತದ ಲಕ್ಷಣವಾಗಿದೆ.
ಎದೆಯುರಿ ಅಥವಾ ಅಜೀರ್ಣವೂ ಸಹ ಹೃದಯಾಘಾತದ ಲಕ್ಷಣಗಳಾಗಿವೆ.
ಲಘು ತಲೆತಿರುಗುವಿಕೆ, ಹಠಾತ್ ತಲೆತಿರುಗುವಿಕೆ ಅಥವಾ ವಾಕರಿಕೆ ಇದ್ದರೆ ಅದು ಸಹ ಹೃದಯಾಘಾತದ ಲಕ್ಷಣ.