Health Tips: ಪ್ರತಿದಿನ ಮೊಸರು ತಿಂದರೆ ಏನಾಗುತ್ತೆ ಗೊತ್ತಾ?
ಪ್ರಪಂಚದಾದ್ಯಂತ ಜನರು ಮೊಸರನ್ನು ವ್ಯಾಪಕವಾಗಿ ಸೇವಿಸುತ್ತಾರೆ.
ನಮ್ಮ ದಿನನಿತ್ಯದ ಆಹಾರದಲ್ಲಿ ಮೊಸರು ಸೇರಿಸುವುದರಿಂದ ಹಲವಾರು ಪ್ರಯೋಜನಗಳಿವೆ.
ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಬಿ 2, ವಿಟಮಿನ್ ಬಿ 12, ಮೆಗ್ನೀಸಿಯಮ್, ಪೊಟ್ಯಾಸಿಯಮ್‌ಗಳಿವೆ
ಮೊಸರಿನಲ್ಲಿ ಇರುವ ಪ್ರೋಬಯಾಟಿಕ್ ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
ವಿವಿಧ ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ. ಮೊಸರಿನಲ್ಲಿರುವ ಸತು ಮತ್ತು ಖನಿಜಗಳು ನಮ್ಮ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.
ಮೊಸರಿನಲ್ಲಿ ಇರುವ ಬ್ಯಾಕ್ಟೀರಿಯಾಗಳು ನಮ್ಮ ತ್ವಚೆಗೆ ಅಗತ್ಯವಿರುವ ತೇವಾಂಶವನ್ನು ಒದಗಿಸಿ ಹೊಳೆಯುವ ಮೈಬಣ್ಣವನ್ನು ನೀಡುತ್ತದೆ.
ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವು ದೇಹದ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.