ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಜವಾನ ನೀರು ಕುಡಿಯುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ಅಜವಾನ ನೀರನ್ನು ಕುಡಿಯುವುದರಿಂದ ಸುಲಭವಾಗಿ ತೂಕ ಇಳಿಸಬಹುದು ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.
ಆಯುರ್ವೇದದಲ್ಲಿ ಬಳಸಲಾಗುವ ಓಂಕಾಳು, ಅಜ್ವೈನ್ ಎಂದೆಲ್ಲಾ ಕರೆಯಲಾಗುವ ಅಜವಾನವು ಹಲವಾರು ಔಷಧೀಯ ಗುಣ ಹೊಂದಿದೆ.
ಅಜವಾನ ನೀರು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ದೇಹವನ್ನು ಸದೃಢಗೊಳಿಸುತ್ತದೆ.
ಅಜನವಾನ ನೀರು ಸೇವನೆಯು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಅಜವಾನ ಸೇವನೆಯು ಸಂಧಿವಾತದಂತಹ ಸಮಸ್ಯೆಗಳೊಂದಿಗೆ ಹೋರಾಡುವ ಜನರಿಗೆ ಪರಿಹಾರ ನೀಡುತ್ತದೆ.
ಅಜವಾನ ಮುಟ್ಟಿನ ಸಮಯದಲ್ಲಿನ ಹೊಟ್ಟೆ ನೋವು ಮತ್ತು ಅತಿಯಾದ ರಕ್ತಸ್ರಾವವನ್ನು ತಡೆಯುತ್ತದೆ.
ಅಜವಾನವು ಚಯಾಪಚಯ ಸುಧಾರಿಸುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.