ಬೂದುಗುಂಬಳಕಾಯಿ ಅತಿಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ತರಕಾರಿಯಾಗಿದೆ.
ಬೂದುಗುಂಬಳಕಾಯಿಯಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್-ಸಿ ಅಂಶ ಹೆಚ್ಚಾಗಿ ಕಂಡುಬರುತ್ತದೆ.
ಬೂದುಗುಂಬಳಕಾಯಿ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣದ ಅಂಶ ಮತ್ತು ಫಾಸ್ಫರಸ್ ಜೊತೆಗೆ ನಾರಿನಂಶ ಹೆಚ್ಚಿದೆ.
ನೈಸರ್ಗಿಕವಾಗಿ ಬೂದುಗುಂಬಳಕಾಯಿಯಲ್ಲಿ ಮಹಿಳೆಯರ ರಕ್ತ ಸ್ರಾವ ಸಮಸ್ಯೆಯನ್ನು ದೂರ ಮಾಡುವ ಗುಣವಿದೆ.
ಬೂದುಗುಂಬಳಕಾಯಿ ನರಮಂಡಲ ಮತ್ತು ಮೆದುಳನ್ನು ಶಾಂತ ಪಡಿಸುವ ಜೊತೆಗೆ ಮೆದುಳಿನ ಆರೋಗ್ಯ ರಕ್ಷಣೆ ಮಾಡುವ ಗುಣ ಹೊಂದಿದೆ.
ಒಂದು ಗ್ಲಾಸ್ ಬೂದುಗುಂಬಳಕಾಯಿ ಜ್ಯೂಸ್ ಸೇವನೆಯಿಂದ ಮಾನಸಿಕ ಆತಂಕ, ನಿದ್ರಾಹೀನತೆ, ಎಪಿಲೆಪ್ಸಿ ಇತಿಹಾಸ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಬೂದುಗುಂಬಳಕಾಯಿ ಜ್ಯೂಸ್ ತಲೆ ಹೊಟ್ಟಿನ ಸಮಸ್ಯೆಯನ್ನು ಬಹಳ ಬೇಗನೆ ನಿವಾರಣೆ ಮಾಡುತ್ತದೆ.
ತೂಕ ನಷ್ಟ ಮಾಡಿಕೊಳ್ಳಲು, ರಕ್ತದೊತ್ತಡ ನಿಯಂತ್ರಿಸಲು ಬೂದುಗುಂಬಳಕಾಯಿ ಸಹಕಾರಿಯಾಗಿದೆ.