ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು.
ನಾರಿನಾಂಶ ಸಮೃದ್ಧವಾಗಿರುವ ಹಣ್ಣು ಹಾಗೂ ತರಕಾರಿ ಸೇವನೆಯಿಂದ ಹೃದ್ರೋಗ ಸೇರಿದಂತೆ ಹಲವಾರು ರೋಗಗಳನ್ನು ದೂರವಿಡಬಹುದು.
ಬೆಂಡೆಕಾಯಿಯಲ್ಲಿ ವಿಟಮಿನ್ K, C, A ಹಾಗೂ ಮೆಗ್ನಿಶಿಯಂ, ಫೋಲೆಟ್ ಹಾಗೂ ನಾರಿನಂಶ ಸಮೃದ್ಧವಾಗಿದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡಲು ಸಹಕಾರಿ.
ಹಾಗಲಕಾಯಿಯಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೌಷ್ಟಿಕಾಂಶ ಅಧಿಕವಾಗಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಸಮೃದ್ಧವಾಗಿದ್ದು, ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅಂಶಗಳನ್ನು ಹೊಂದಿದೆ.
ತೊಂಡೆಕಾಯಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ಸಹಕಾರಿ. ಇದರಲ್ಲಿ ವಿಟಮಿನ್ C, B1, B2 ಹಾಗೂ A ಅಂಶವಿರುತ್ತದೆ. ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ (HLD) ಮಟ್ಟವನ್ನು ಹೆಚ್ಚಿಸುತ್ತದೆ.
ಕಲ್ಲಂಗಡಿಯಲ್ಲಿ ಪೋಷಕಾಂಶ ಸಮೃದ್ಧವಾಗಿರುತ್ತದೆ. ಇದರಲ್ಲಿರುವ ಲೈಕೋಪೊನ್ ಅಂಶವು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ.
ಸೌತೆಕಾಯಿಯಲ್ಲಿ ನೀರಿನಂಶ ಸಮೃದ್ಧವಾಗಿರುತ್ತದೆ. ಇದರಲ್ಲಿರುವ ಫೈಟೊಸ್ಟೆರಾಲ್ಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಲು ನೆರವಾಗುತ್ತವೆ. ಇದರಲ್ಲಿರುವ ಪೆಕ್ಟಿನ್ ನಾರಿನಾಂಶವು ಕೊಲೆಸ್ಟ್ರಾಲ್ ಪ್ರಮಾಣ ತಗ್ಗಿಸುತ್ತದೆ.