ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಹಾಗೂ ದೇಹವನ್ನು ತಂಪಾಗಿಡಲು ಈ ಆಹಾರಗಳನ್ನು ಸೇವಿಸಿರಿ.
ಜೀರಿಗೆಯು ದೇಹವನ್ನು ತಂಪಾಗಿ ಇಡುತ್ತದೆ, ಆದ್ದರಿಂದ ಬೇಸಿಗೆಯಲ್ಲಿ ಅಡುಗೆಯಲ್ಲಿ ತಪ್ಪದೆ ಬಳಸಿ.
ಚಿಯಾ ಬೀಜ ಸಹ ಬೇಸಿಗೆಗೆ ತುಂಬಾನೇ ಒಳ್ಳೆಯದು. ಇದರಲ್ಲಿ ನಾರಿನಂಶವಿದ್ದು, ಜೀರ್ಣಕ್ರಿಯೆಗೆ ಸಹಕಾರಿ.
ಅಗಸೆ ಬೀಜವು ದೇಹದಲ್ಲಿರುವ ಕಶ್ಮಲವನ್ನು ಹೊರಹಾಕುವುದರಿಂದ ದೇಹದ ಆರೋಗ್ಯಕ್ಕೆ ಒಳ್ಳೆಯದು.
ಸೋಂಪು ಕಾಳು ದೇಹವನ್ನು ತಂಪಾಗಿಡಲು ಸಹಕಾರಿ. ಊಟವಾದ ಬಳಿಕ ಸ್ವಲ್ಪ ಬಾಯಿಗೆ ಹಾಕಿದರೆ ಜೀರ್ಣಕ್ರಿಯೆಗೆ ಒಳ್ಳೆಯದು.
ಬೇಸಿಗೆಯಲ್ಲಿ ಸೇವಿಸಿದರೆ ಗಸೆಗಸೆ ತುಂಬಾನೇ ಒಳ್ಳೆಯದು, ಇದು ದೇಹದಲ್ಲಿರುವ ಉಷ್ಣಾಂಶವನ್ನು ಹೊರಹಾಕುತ್ತದೆ.
ಬೇಸಿಗೆಯಲ್ಲಿ ಕೊತ್ತಂಬರಿ ಬೀಜವು ದೇಹದಲ್ಲಿರುವ ಉಷ್ಣಾಂಶ ಕಡಿಮೆ ಮಾಡುತ್ತದೆ.
ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಮೆಂತೆ ಬೀಜ ದೇಹವನ್ನು ತಂಪಾಗಿಸುತ್ತದೆ.