ಸಪೋಟ ಅಥವಾ ಚಿಕ್ಕು ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಸಪೋಟ ಹಣ್ಣಿನಲ್ಲಿ ಕಾರ್ಬೋ ಹೈಡ್ರೇಟ್, ಫೈಬರ್, ಕಬ್ಬಿಣದಂಶ, ವಿಟಮಿನ್ A, ವಿಟಮಿನ್ C & ಕ್ಯಾಲ್ಸಿಯಂ ಹೇರಳವಾಗಿದೆ.
ಸಪೋಟ ಹಣ್ಣು ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ. ಮೂಳೆ ಹಾಗೂ ಹಲ್ಲುಗಳು ಸದೃಢವಾಗುತ್ತದೆ.
ಸಪೋಟ ಹಣ್ಣು ದೇಹದ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.
ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಸಪೋಟ ಹಣ್ಣು ಸ್ನಾಯು ನೋವು ಮತ್ತು ಗಂಟು ನೋವಿಗೆ ಉತ್ತಮ ಮನೆಮದ್ದು.
ಸಪೋಟ ಹಣ್ಣಿನಲ್ಲಿ ಕ್ಯಾನ್ಸರ್ ತಡೆಗಟ್ಟುವ ಗುಣವಿದೆ. ಈ ಹಣ್ಣು ಸೇವನೆಯಿಂದ ಶ್ವಾಸಕೋಶ, ಬಾಯಿಯ ಕ್ಯಾನ್ಸರ್ ಬಾರದಂತೆ ರಕ್ಷಿಸಿಕೊಳ್ಳಬಹುದು.
ಗರ್ಭಿಣಿಯರಿಗೆ ಸಪೋಟ ಹಣ್ಣು ತುಂಬಾ ಒಳ್ಳೆಯದು. ಇದು ದೇಹದಲ್ಲಿ ಶಕ್ತಿ ಸಂಚಾರವಾಗುವಂತೆ ಮಾಡುತ್ತದೆ.
ಸಪೋಟ ಹಣ್ಣಿನಲ್ಲಿ ಪೋಟ್ಯಾಷಿಯಂ ಹೇರಳವಾಗಿದ್ದು, ಅಧಿಕ ರಕ್ತದೊತ್ತಡ ಇರುವವರಿಗೆ ಇದು ತುಂಬಾ ಒಳ್ಳೆಯದು.