ಬೂದುಗುಂಬಳಕಾಯಿ ಜ್ಯೂಸ್ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯುತ್ತೀರಿ.
ಬಿಳಿ ಕುಂಬಳಕಾಯಿ ಅಥವಾ ಬೂದುಗುಂಬಳಕಾಯಿ ಹೆಚ್ಚಿನ ಪೌಷ್ಠಿಕಾಂಶಯುಕ್ತ ಆಹಾರವಾಗಿದೆ.
ಕಲ್ಲಂಗಡಿಯಂತೆ ಬೂದುಗುಂಬಳಕಾಯಿ ಸಹ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ.
ಬೂದುಗುಂಬಳಕಾಯಿಯಲ್ಲಿ ಶೇ.96ರಷ್ಟು ನೀರಿನ ಅಂಶವಿದ್ದು, ಇದು ನಿಮ್ಮನ್ನು ಹೈಡ್ರೇಟ್ ಆಗಿರಲು ಸಹಾಯ ಮಾಡುತ್ತದೆ.
ಬೂದುಗುಂಬಳಕಾಯಿಯ ಉರಿಯೂತ ನಿವಾರಕ ಗುಣ ಉರಿಯೂತಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಹಕಾರಿ.
ನಿಯಮಿತವಾಗಿ ಬೂದುಗುಂಬಳಕಾಯಿ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಬೂದುಗುಂಬಳಕಾಯಿಯಲ್ಲಿ ವಿಟಮಿನ್ C, B ಕಾಂಪ್ಲೆಕ್ಸ್, ಕ್ಯಾಲ್ಸಿಯಂ, ಕಬ್ಬಿಣ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿವೆ.
ಬ್ರಾಂಕೈಟಿಸ್ ಮತ್ತು ಅಸ್ತಮಾದಂತಹ ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗೆ ಬೂದುಗುಂಬಳಕಾಯಿ ಜ್ಯೂಸ್ ಉತ್ತಮ ಆಯ್ಕೆ.