ಪ್ರತಿದಿನ ನಿಯಮಿತವಾಗಿ ಎಲೆಕೋಸು ಸೇವಿಸುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.
ಎಲೆಕೋಸಿನಲ್ಲಿ ವಿಟಮಿನ್ ‘ಸಿ’ ಸಹಿತ ಹಲವು ಪೋಷಕಾಂಶಗಳಿವೆ.
ಎಲೆಕೋಸಿನಲ್ಲಿ ಪೊಟ್ಯಾಶಿಯಂ ಮತ್ತು ಕರಗದ ನಾರಿನಂಶ ಸಮೃದ್ದವಾಗಿದ್ದು, ತೂಕ ನಷ್ಟಕ್ಕೆ ಪ್ರಯೋಜನಕಾರಿ.
ಎಲೆಕೋಸು ಸೇವನೆಯು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಎಲೆಕೋಸಿನಲ್ಲಿರುವ ಕರಗದ ನಾರು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತವೆ.
ಎಲೆಕೋಸು ಬಿ-ವಿಟಮಿನ್ & ಫೋಲೇಟ್ನ ಸಮೃದ್ಧ ಮೂಲವಾಗಿದ್ದು, ಇದು ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
ಎಲೆಕೋಸು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಎಲೆಕೋಸು ಸೇವನೆಯಿಂದ ನೀವು ಕ್ಯಾನ್ಸರ್ ಅಪಾಯದಿಂದ ಪಾರಾಗಬಹುದು.