ಕ್ಯಾಪ್ಸಿಕಂ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಇಂದು ಬಹುತೇಕ ಜನರು ಮಧುಮೇಹದಿಂದ ಬಳಲುತ್ತಿದ್ದು, ಅಧಿಕ ರಕ್ತದೊತ್ತಡ, ಬೊಜ್ಜು ಸೇರಿ ಹಲವು ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
'ಕ್ಯಾಪ್ಸಿಕಂ'ನ ಮೆಣಸು ಸೇವನೆಯಿಂದ ಮಧುಮೇಹವನ್ನು ನಿಯಂತ್ರಣವಾಗುತ್ತದೆ ಎಂಬ ಅಂಶ ಸಂಶೋಧನೆಯಿಂದ ಗೊತ್ತಾಗಿದೆ.
ಹಸಿರು, ಹಳದಿ & ಕೆಂಪು ಮೆಣಸಿನಲ್ಲಿರುವ ಗ್ಲೂಕೋಸಡೇಸ್ ಮತ್ತು ಲಿಪಿಡ್ ತೆಗೆಯುವ ಕಿಣ್ವಗಳು ಮಧುಮೇಹ ತಡೆಯಲು ಸಹಕಾರಿ.
ಕ್ಯಾಪ್ಸಿಕಂ ಫ್ಲೇವನಾಯ್ಡ್ಗಳು ಮತ್ತು ಸೈಟೋಕೆಮಿಕಲ್ಗಳನ್ನು ಹೊಂದಿದ್ದು, ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.
ಕ್ಯಾಪ್ಸಿಕಂ ಫೈಬರ್ನಲ್ಲಿ ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಕ್ಯಾಪ್ಸಿಕಂ ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಸಕ್ಕರೆ, ಫೈಬರ್ & ಕೊಬ್ಬುಗಳಲ್ಲಿ ಸಮೃದ್ಧವಾಗಿದೆ.
ಕ್ಯಾಪ್ಸಿಕಂನಲ್ಲಿ ವಿಟಮಿನ್ ‘ಸಿ’ ಸಮೃದ್ಧವಾಗಿದ್ದು, ಇದು ನಮ್ಮ ಕೂದಲು ಮತ್ತು ಚರ್ಮಕ್ಕೆ ಒಳ್ಳೆಯದು.