ನಿಯಮಿತವಾಗಿ ಕರಿಮೆಣಸು ಸೇವಿಸುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.
ಕರಿಮೆಣಸು ಕ್ಯಾಲ್ಸಿಯಂ, ಕಬ್ಬಿಣ, ಕ್ಯಾರೋಟಿನ್ ಮತ್ತು ಥೈಮೋನ್ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
ಕಾಳುಮೆಣಸು ಸೇವನೆಯು ಹೃದಯಾಘಾತ ಮತ್ತು ಪಾರ್ಶ್ವವಾಯು ಕಾಯಿಲೆ ಬರದಂತೆ ರಕ್ಷಿಸುತ್ತದೆ.
ಕರಿಮೆಣಸು ಸೇವನೆಯು ರಕ್ತ ಹೆಪ್ಪು ಗಟ್ಟುವುದನ್ನು ತಡೆಯುತ್ತದೆ.
ಕರಿಮೆಣಸು ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯು ಸುಧಾರಿಸುತ್ತದೆ.
ಕರಿಮೆಣಸು ಕೀಲು ನೋವು, ನೆಗಡಿ, ಕೆಮ್ಮು & ಹೊಟ್ಟೆನೋವು ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳನ್ನು ತೊಡೆದುಹಾಕಲು ಕರಿಮೆಣಸು ಸಹಾಯ ಮಾಡುತ್ತದೆ.
ಹೊಟ್ಟೆಯ ಗ್ಯಾಸ್ ಮತ್ತು ಖಿನ್ನತೆಯಂತಹ ಸಮಸ್ಯೆಗಳನ್ನು ಸಹ ಕರಿಮೆಣಸು ನಿವಾರಿಸುತ್ತದೆ.