ಮೆಂತ್ಯ ಕಾಳು ರುಚಿಯಲ್ಲಿ ಸ್ವಲ್ಪ ಕಹಿಯಾಗಿದ್ದರೂ ಇದರಿಂದ ನಮಗೆ ಅನೇಕ ಆರೋಗ್ಯ ಪ್ರಯೋಜನಗಳಿವೆ.
ಮೆಂತ್ಯ ಕಾಳುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಹಿಂದಿನ ರಾತ್ರಿ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿ, ಮರುದಿನ ಬೆಳಗ್ಗೆ ಅದನ್ನು ನೀರು ಸಹಿತ ಸೇವಿಸಿ.
ನೆನೆಸಿದ ಮೆಂತ್ಯ ಕಾಳು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ ಮತ್ತು ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಹೋಗುತ್ತವೆ.
ಮೆಂತ್ಯ ಕಾಳು ರಕ್ತದ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವುದರಿಂದ ಮಧುಮೇಹಿಗಳಿಗೆ ಹೇಳಿ ಮಾಡಿಸಿದ ಮನೆಮದ್ದು.
ಗ್ಯಾಸ್ಟ್ರಿಕ್ನಿಂದ ಎದೆಯುರಿ ಸಮಸ್ಯೆ ಇದ್ದರೂ ನೀವು ಮೆಂತೆ ಕಾಳನ್ನು ಸೇವಿಸಬಹುದು.
ಖಾಲಿ ಹೊಟ್ಟೆಯಲ್ಲಿ ಒಂದಿಷ್ಟು ಮೆಂತೆ ಕಾಳನ್ನು ಜಗಿಯುವುದರಿಂದ ಅಸಿಡಿಟಿ ದೂರವಾಗುವುದರ ಜೊತೆಗೆ ದೇಹದ ತೂಕವೂ ಕಡಿಮೆಯಾಗುತ್ತದೆ.
ಮೆಂತೆ ಪುಡಿಯನ್ನು ನಿಂಬೆರಸ ಮತ್ತು ಜೇನಿನಲ್ಲಿ ಬೆರೆಸಿ ಸೇವಿಸಿದರೆ ಜ್ವರ ಕಡಿಮೆಯಾಗುತ್ತದೆ. ಮೆದುಳಿನ ಕ್ರೀಯಾಶೀಲತೆಗೂ ಇದು ಸಹಕಾರಿ.