ಸೀಬೆಹಣ್ಣು ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ.
ಅಧಿಕ ಕ್ಯಾಲರಿ ಹೊಂದಿರುವ ಸೀಬೆಹಣ್ಣು ಮನುಷ್ಯನ ದೇಹಕ್ಕೆ ಅಗತ್ಯವಿರುವ ವಿಟಮಿನ್ ಮತ್ತು ಪೋಷಕಾಂಶ ಒದಗಿಸುತ್ತದೆ.
ಮನುಷ್ಯನ ಶರೀರದಲ್ಲಿರುವ ಕೊಬ್ಬಿನ ಪ್ರಮಾಣ ಕಡಿಮೆಮಾಡಲು ಸೀಬೆಹಣ್ಣು ಉತ್ತಮ ಆಯ್ಕೆಯಾಗಿದೆ.
ಸೀಬೆ ಹಣ್ಣು ಕಿತ್ತಳೆ ಹಣ್ಣಿಗಿಂತಲೂ ಅತಿಹೆಚ್ಚು ವಿಟಮಿನ್ C ಹೊಂದಿವೆ.
ಸೀಬೆ ಹಣ್ಣು ಜೀರ್ಣಕ್ರಿಯೆ ಹೆಚ್ಚಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.
ಸೀಬೆ ಹಣ್ಣು ಹೃದಯ ಸಂಬಂಧಿ ಕಾಯಿಲೆಗಳನ್ನು ಕೂಡ ದೂರಮಾಡುತ್ತದೆ.
ಮಧುಮೇಹಿಗಳು ಸಿಪ್ಪೆ ತೆಗೆದು ಸೀಬೆ ಹಣ್ಣು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸೀಬೆ ಹಣ್ಣು ವಿಟಾಮಿನ್ A, B, C & ಪೊಟಾಶಿಯಂ ಅಂಶಗಳನ್ನು ಹೊಂದಿದೆ.