ಮಾವಿನ ಹಣ್ಣಿನಲ್ಲಿ ಫೈಬರ್ ಮತ್ತು ಕ್ಯಾಲೊರಿ ಹೆಚ್ಚಾಗಿರುವುದರಿಂದ ಹಸಿವು ಕಡಿಮೆಯಾಗುತ್ತದೆ.
ಮಾವಿನ ಹಣ್ಣು ಸೇವಿಸುವುದರಿಂದ ದೇಹದ ತೂಕ ನಿಯಂತ್ರಿಸಲು ಸಹಕರಿಸುತ್ತದೆ.
ಮಾವಿನ ಹಣ್ಣುಗಳಲ್ಲಿ ಕಂಡುಬರುವ ಗ್ಲುಟಮಿನ್ ಅಂಶವು ಜ್ಞಾಪಕ ಶಕ್ತಿ ಹೆಚ್ಚಿಸುತ್ತದೆ.
ಮಾವಿನ ಹಣ್ಣು ಸೇವನೆಯಿಂದ ದೇಹದ ರೋಗ ನಿರೋಧ ಶಕ್ತಿ ಹೆಚ್ಚುತ್ತದೆ.
ಮಾವಿನ ಹಣ್ಣು ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಿಸಲು ಸಹಕಾರಿ.
ಗರ್ಭಿಣಿಯರು ಸಹ ಮಾವಿನ ಹಣ್ಣನ್ನು ತಿನ್ನಬಹುದೆಂದು ವೈದ್ಯರು ಸಲಹೆ ನೀಡುತ್ತಾರೆ.
ಮಾವಿನ ಹಣ್ಣು ನಿಮ್ಮ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಮಾವಿನ ಸೇವನೆಯು ದೃಷ್ಟಿ ಸುಧಾರಿಸುತ್ತದೆ.