ತ್ರಿಫಲಾ ಚೂರ್ಣ ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
"ತ್ರಿಫಲಾ" ಚೂರ್ಣ ನೆಲ್ಲಿಕಾಯಿ, ಅಳಲೆಕಾಯಿ ಮತ್ತು ತಾರಿಕಾಯಿ ಈ 3 ಫಲಗಳ ಅನುಪಮ ಮಿಶ್ರಣವಾಗಿದೆ.
ತ್ರಿಫಲಾ ಚೂರ್ಣ ಸೇವನೆಯಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.
ತ್ರಿಫಲಾ ಚೂರ್ಣವು ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಾಯ ಮಾಡುತ್ತದೆ.
ತ್ರಿಫಲಾ ಚೂರ್ಣ ಸೇವನೆಯಿಂದ ಬಾಯಿಯ ದುರ್ಗಂಧವು ದೂರವಾಗುತ್ತದೆ.
ಸುಲಭವಾಗಿ ದೇಹದ ತೂಕ ಇಳಿಸಲು ಚೇನುತುಪ್ಪದೊಂದಿಗೆ ತ್ರಿಫಲಾ ಚೂರ್ಣ ಸೇವಿಸಬೇಕು.
ಈ ತ್ರಿಫಲಾ ಚೂರ್ಣವು ದೇಹಕ್ಕೆ ಬಲ ನೀಡುತ್ತದೆ ಮತ್ತು ಬಾಯಿ ಹುಣ್ಣು ನಿವಾರಿಸುತ್ತದೆ.
ಪಿತ್ತ, ಆಮ್ಲ ಪಿತ್ತ ಮತ್ತು ಹೊಟ್ಟೆಯುಬ್ಬರ ನಿವಾರಕವಾಗಿ ಈ ತ್ರಿಫಲಾ ಚೂರ್ಣ ಕೆಲಸ ಮಾಡುತ್ತದೆ.