ಇತ್ತೀಚಿನ ದಿನಗಳಲ್ಲಿ ಜನರು ಅನೇಕ ಹೊಟ್ಟೆಯ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಅನೇಕರು ಇಂದು ಮಲಬದ್ಧತೆ, ಅಜೀರ್ಣ, ಗ್ಯಾಸ್ ಮತ್ತು ವಾಯು ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ನೀವೂ ಸಹ ಈ ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಈ ಸಿಂಪಲ್ ಸಲಹೆಗಳನ್ನು ಪಾಲಿಸಿರಿ.
ಅತಿಯಾಗಿ ತಿನ್ನುವುದರಿಂದ ಮಲಬದ್ಧತೆಯ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಇತಿಮಿತಿಯಲ್ಲಿ ಆಹಾರವನ್ನು ಸೇವಿಸಬೇಕು.
ಪ್ರತಿದಿನ ಬೆಳಗ್ಗೆ ಉರುಗು ಬೆಚ್ಚಗಿನ ನೀರಿನಿಂದ ನಿಮ್ಮ ದಿನವನ್ನು ಪ್ರಾರಂಭಿಸಬೇಕು. ಇದರಿಂದ ನಿಮ್ಮ ಹೊಟ್ಟೆಯು ಸರಿಯಾಗಿ ಸ್ವಚ್ಛವಾಗಿರುತ್ತದೆ.
ನೀವು ಪ್ರತಿದಿನ ಬೆಳಗ್ಗೆ ವಾಕಿಂಗ್ ಹೋಗಬೇಕು. ಇದರಿಂದ ತೂಕವು ನಿಯಂತ್ರಣದಲ್ಲಿರುತ್ತದೆ ಮತ್ತು ಹೊಟ್ಟೆಯು ಸಹ ಸ್ವಚ್ಛವಾಗಿರುತ್ತದೆ.
ನೀವು ಯಾವಾಗಲೂ ಹೆಚ್ಚುವರಿ ಎಣ್ಣೆಯನ್ನು ತಿನ್ನುವುದನ್ನು ತಪ್ಪಿಸಬೇಕು. ಇಲ್ಲದಿದ್ರೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಗಂಭೀರ ಕಾಯಿಲೆಗಳು ನಿಮ್ಮನ್ನು ಕಾಡಬಹುದು.
ಪ್ರತಿದಿನ ರಾತ್ರಿ ಮಲಗುವ ಮುನ್ನ ಇಸಾಬ್ಗೋಲ್ ಹೊಟ್ಟನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಬೇಕು.