ಬೇಸಿಗೆಯಲ್ಲಿ ಉರಿಮೂತ್ರ ಸಮಸ್ಯೆಯು ಅನೇಕ ಜನರನ್ನು ಕಾಡುತ್ತದೆ.
ದೇಹದಲ್ಲಿ ನೀರು ಕಡಿಮೆಯಾದಾಗ ಅಥವಾ ಸೋಂಕು ಆದಾಗ ಉರಿಮೂತ್ರ ಸಮಸ್ಯೆ ಕಂಡುಬರುತ್ತದೆ.
ನಿತ್ಯ ಉರಿಮೂತ್ರ ಸಮಸ್ಯೆ ಬರುತ್ತಿದ್ದರೆ ಗರ್ಭಕೋಶ ತೊಂದರೆ, ಕಿಡ್ನಿ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
ಉರಿಮೂತ್ರ ಸಮಸ್ಯೆಯಿಂದ ಹೊರಬರಬೇಕಾದರೆ ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಕುಡಿಯಬೇಕು.
ದಾಳಿಂಬೆಯಲ್ಲಿರುವ ಆಂಟಿ-ಆಕ್ಸಿಡೆಂಟ್ ಉರಿಮೂತ್ರ ಸಮಸ್ಯೆ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ದಾಳಿಂಬೆಯಲ್ಲಿ ವಿಟಮಿನ್ ʼಸಿʼ ಇದ್ದು, ಉರಿಮೂತ್ರ ಕಡಿಮೆ ಮಾಡಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುತ್ತದೆ.
ಉರಿಮೂತ್ರ ಕಂಡುಬಂದರೆ ಸಾಕಷ್ಟು ನೀರು ಕುಡಿಯಬೇಕು.
ನೀರು ಜಾಸ್ತಿ ಕುಡಿಯುವುದರಿಂದ ದೇಹದಲ್ಲಿರುವ ಮೂತ್ರ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಹೊರಹಾಕಿ ಕಿಡ್ನಿಯನ್ನು ಸಂರಕ್ಷಿಸಬಹುದು.