ಜಗತ್ತಿನಲ್ಲಿ ಮನುಷ್ಯನಿಂದ ಹಿಡಿದು ಪ್ರತಿಯೊಂದು ಜೀವಿಗೂ ನೀರು ತುಂಬಾನೇ ಮುಖ್ಯ.
ಒಂದು ದಿನದ ಅವಧಿಯಲ್ಲಿ ಒಬ್ಬ ಮನುಷ್ಯ ಎಷ್ಟು ನೀರು ಕುಡಿಯಬೇಕು ಅನ್ನೋ ಪ್ರಶ್ನೆ ಪ್ರತಿಯೊಬ್ಬರಿಗೂ ಕಾಡುತ್ತದೆ.
ಜಾಸ್ತಿ ಅಥವಾ ಕಡಿಮೆ ನೀರು ಕುಡಿದರೂ ನಿಮಗೆ ಅನಾರೋಗ್ಯ ಸಮಸ್ಯೆ ಕಾಡುತ್ತದೆ.
ಸಾಮಾನ್ಯವಾಗಿ ಓರ್ವ ವ್ಯಕ್ತಿಯು ದಿನಕ್ಕೆ 6-8 ಗ್ಲಾಸ್ ನೀರು ಸೇವನೆ ಮಾಡುವುದು ಉತ್ತಮ.
ವರದಿಗಳ ಪ್ರಕಾರ ಪುರುಷರು ದಿನಕ್ಕೆ 3.7 ಲೀಟರ್ ಹಾಗೂ ಮಹಿಳೆಯರು ದಿನಕ್ಕೆ 2.7 ಲೀಟರ್ ನೀರು ಕುಡಿಯಬೇಕು.
ನೀರಿನ ಸೇವನೆಯು ಕುಡಿಯುವ ನೀರಿನ ಜೊತೆಗೆ ಇತರೆ ಪಾನೀಯಗಳು ಹಾಗೂ ಹಣ್ಣು, ತರಕಾರಿ ಸೇವನೆಯನ್ನೂ ಒಳಗೊಂಡಿರುತ್ತದೆ.
ವ್ಯಾಯಾಮ ಮಾಡುವ ಮುನ್ನ ಕಡಿಮೆ ಮತ್ತು ನಂತರ ಹೆಚ್ಚು ನೀರನ್ನು ಕುಡಿಯಬೇಕು.
ಸೆಖೆ ಹೆಚ್ಚಿರುವ ಪ್ರದೇಶದಲ್ಲಿ ವಾಸಿಸುವವರು ಸಾಮಾನ್ಯಕ್ಕಿಂತ ಹೆಚ್ಚು ಪ್ರಮಾಣದ ನೀರನ್ನು ಕುಡಿಯಬೇಕು.