ಬೇಸಿಗೆ ಮುಗಿದು ಮಳೆಗಾಲ ಆರಂಭವಾಗಿರುವುದರಿಂದ ಪ್ರತಿಯೊಬ್ಬರಿಗೂ ಕೆಮ್ಮು, ನೆಗಡಿ & ತಲೆನೋವಿನ ಸಮಸ್ಯೆ ಕಾಡುತ್ತದೆ.
ತುಳಸಿ ಎಲೆಗಳನ್ನು ಸೇವಿಸುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ ಮತ್ತು ತಲೆನೊವು ಮಾಯವಾಗುತ್ತದೆ.
ಬಿಸಿ ನೀರು ಮತ್ತು ನಿಂಬೆರಸವು ತಲೆನೋವಿಗೆ ಅತ್ಯಂತ ಪರಿಣಾಮಕಾರಿ ಮನೆಮದ್ದಾಗಿದೆ.
ಶುಂಠಿಯ ಸೇವನೆಯಿಂದ ನಿಮ್ಮ ತಲೆನೋವು ಶೀಘ್ರವೇ ಕಡಿಮೆಯಾಗುತ್ತದೆ.
ಪುದೀನಾ ಜ್ಯೂಸ್ ಸಹ ತಲೆನೋವಿಗೆ ತುಂಬಾ ಪ್ರಯೋಜನಕಾರಿ.
ಮಜ್ಜಿಗೆ ಅಥವಾ ಎಳನೀರು ಕುಡಿಯುವುದರಿಂದ ನೀವು ತಲೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಹರಳೆಣ್ಣೆಯನ್ನು ನೆತ್ತಿಯ ಭಾಗಕ್ಕೆ ಮತ್ತು ಪಾದಗಳ ಭಾಗಕ್ಕೆ ಹಚ್ಚುವುದರಿಂದಲೂ ತಲೆನೋವು ಮಾಯವಾಗುತ್ತದೆ.
ಶುಂಠಿ ಚಹಾ ಸೇವನೆಯಿಂದಲೂ ನೀವು ತಲೆನೋವಿನಿಂದ ಪರಿಹಾರ ಪಡೆಯಬಹುದು.