ಸೇಬು ಹಣ್ಣು ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಒಂದು ಅಧ್ಯಯನದ ಪ್ರಕಾರ ಸೇಬಿನ ಸೇವನೆಯಿಂದ ಹೃದಯದ ಸ್ತಂಭನದ ಸಾಧ್ಯತೆ ತಗ್ಗುತ್ತದೆ.
ಸೇಬಿನಲ್ಲಿ ವಿವಿಧ ರೀತಿಯ ವಿಟಮಿನ್, ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ C, K ಮತ್ತು ಪೊಟಾಶಿಯಂ ಇದೆ.
ನಿಯಮಿತವಾಗಿ ಸೇಬು ಸೇವನೆಯಿಂದ ಹೃದಯದ ಆರೋಗ್ಯ ವೃದ್ಧಿಸುತ್ತದೆ.
ಸೇಬು ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವ ಮೂಲಕ ಹೃದಯ ಕಾಯಿಲೆ ಸಾಧ್ಯತೆಯನ್ನು ತಗ್ಗಿಸುತ್ತದೆ.
ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು & ಪಾಲಿಫೆನಾಲ್ ಅಂಟಿ ಆಕ್ಸಿಡೆಂಟುಗಳಿದ್ದು ಹೃದಯದ ಆರೋಗ್ಯ ವೃದ್ದಿಸುತ್ತದೆ ಹಾಗೂ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ.
ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು, ತೂಕ ಕಳೆದುಕೊಳ್ಳಲು ನೆರವಾಗುತ್ತದೆ.
ಸೇಬಿನಲ್ಲಿರುವ ಪಾಲಿಫೆನಾಲ್ ಆಂಟಿ ಆಕ್ಸಿಡೆಂಟುಗಳು ಮಧುಮೇಹ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತವೆ.