ಎಳನೀರಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ವಿವಿಧ ಬಗೆಯ ವಿಟಮಿನ್ ಮತ್ತು ಖನಿಜಾಂಶಗಳಿವೆ.
ಆಂಟಿಆಕ್ಸಿಡೆಂಟ್ ಗುಣವಿರುವ ಎಳನೀರು ಹಲವಾರು ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಎಳನೀರು ಸೇವನೆಯಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ. ಇದರಲ್ಲಿರುವ ಪೋಟ್ಯಾಸಿಯಂ ಹಾಗೂ ಮೆಗ್ನೀಸಿಯಂ ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ.
ಎಳನೀರು ಸೇವನೆಯಿಂದ ಅಧಿಕ ರಕ್ತದೊತ್ತಡ ಮಾತ್ರವಲ್ಲ ಹೃದಯಾಘಾತ ಮತ್ತು ಸ್ಟ್ರೋಕ್ ಸಮಸ್ಯೆಗಳಿಂದಲೂ ಮುಕ್ತಿ ಸಿಗುತ್ತದೆ.
ಎಳನೀರಿನಲ್ಲಿ ಕೊಬ್ಬಿನಂಶವಿರುವುದಿಲ್ಲ ಹೀಗಾಗಿ ಇದು ಹೃದಯವನ್ನು ರಕ್ಷಿಸುತ್ತದೆ.
ತೂಕ ಇಳಿಸಿಕೊಳ್ಳಲು ಎಳನೀರು ಹೇಳಿ ಮಾಡಿಸಿದ ಮನೆಮದ್ದಾಗಿದೆ.
ಎಳನೀರು ಜೀರ್ಣಕ್ರಿಯೆಯನ್ನು ಸುಗಮಗೊಳಿಸಿ ಚಯಾಪಚಯವನ್ನು ಆರೋಗ್ಯವಾಗಿರಿಸುತ್ತದೆ.
ಎಳನೀರಿನಲ್ಲಿ ಪ್ರೋಟೀನ್ ಹಾಗೂ ಫೈಬರ್ ಅಂಶವಿದ್ದು, ಮಧುಮೇಹಿಗಳು ಸಹ ಇದನ್ನು ಕುಡಿಯಬಹುದಾಗಿದೆ.