ಬಾಯಿಗೆ ಕಹಿಯಾದರೂ ಮೆಂತ್ಯ ಕಾಳು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಮೆಂತ್ಯ ಬೀಜಗಳಲ್ಲಿ ಕೋಲೀನ್, ಇನೋಸಿಟಾಲ್, ಬಯೋಟಿನ್, ವಿಟಮಿನ್ A, B & D, ಕಬ್ಬಿಣ ಮತ್ತು ಫೈಬರ್ ಸಮೃದ್ಧವಾಗಿದೆ.
ಮೆಂತ್ಯ ಕಾಳು ಜೀರ್ಣಕ್ರಿಯೆ ಸುಧಾರಿಸಲು, ಹಸಿವು ಹೆಚ್ಚಿಸಲು ಮತ್ತು ಗ್ಯಾಸ್ ಸಮಸ್ಯೆ ಹೋಗಲಾಡಿಸಲು ಪ್ರಯೋಜನಕಾರಿ.
ರಾತ್ರಿ ಮೆಂತ್ಯ ಕಾಳು ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿನ ಸಮೇತ ಸೇವಿದ್ರೆ ಅನೇಕ ಲಾಭಗಳಿವೆ.
ಬಾಣಂತಿಯರು ಪ್ರತಿನಿತ್ಯ ಮೆಂತ್ಯ ಕಾಳನ್ನು ಸೇವಿಸುವುದರಿಂದ ಎದೆಹಾಲು ಹೆಚ್ಚುತ್ತದೆ.
ಪ್ರತಿನಿತ್ಯ ಮೆಂತ್ಯ ಕಾಳು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
ಮೆಂತ್ಯ ಕಾಳು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಿ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಮೆಂತ್ಯ ಕಾಳು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೂ ಸಹಕಾರಿಯಾಗಿದೆ.