ನಮ್ಮ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಹಲವು ರೀತಿ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ನಾವು ಪ್ರತಿದಿನ ಸುಮಾರು 7-8 ಲೋಟಗಳಷ್ಟು(ಸುಮಾರು 4 ಲೀಟರ್) ನೀರನ್ನು ಕುಡಿಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.
ನೀವು ಕಡಿಮೆ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ ನಿರ್ಜಲೀಕರಣ, ವಾಂತಿ, ತಲೆತಿರುಗುವಿಕೆ & ಹೊಟ್ಟೆ ನೋವಿನಂತಹ ಸಮಸ್ಯೆ ಉಂಟಾಗಬಹುದು. ಕುಳಿತು ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ನಿಂತು ನೀರು ಕುಡಿದರೆ ಅನೇಕ ಸಮಸ್ಯೆ ನಿಮ್ಮನ್ನು ಕಾಡುತ್ತವೆ.
ನಿಂತು ಬಾಟಲಿ ನೀರು ಕುಡಿಯುವ ಅಭ್ಯಾಸ ಹೊಂದಿರುವ ಜನರು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಾರೆ. ಏಕೆಂದರೆ ನೀರು ಹೆಚ್ಚಿನ ವೇಗದಲ್ಲಿ ದೇಹಕ್ಕೆ ಹೋಗುತ್ತದೆ, ಇದು ಹೊಟ್ಟೆಯಲ್ಲಿ ಸಮಸ್ಯೆ ಉಂಟುಮಾಡುತ್ತದೆ.
ನೀವು ಬಾಟಲಿಯಿಂದ ಒಮ್ಮೆಲೇ ನೀರು ಕುಡಿದಾಗ, ಅದರ ತ್ವರಿತ ಹರಿವಿನಿಂದ ಆಹಾರ ಪೈಪ್ & ವಿಂಡ್ ಪೈಪ್ನಲ್ಲಿ ಆಮ್ಲಜನಕದ ಪೂರೈಕೆ ನಿಲ್ಲುತ್ತದೆ. ಇದು ಶ್ವಾಸಕೋಶದ ಮೇಲೆ ಒತ್ತಡ ಹಾಕುತ್ತದೆ & ಇದು ಶ್ವಾಸಕೋಶದ ಸಮಸ್ಯೆಗೆ ಕಾರಣವಾಗುತ್ತದೆ.
ನೀವು ನಿಂತು ನೀರು ಕುಡಿದರೆ ಅದು ನಿಮ್ಮ ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ನೀರು ಫಿಲ್ಟರ್ ಮಾಡದೆಯೇ ತುಂಬಾ ವೇಗವಾಗಿ ಹೊಟ್ಟೆಗೆ ಬೀಳುತ್ತದೆ. ಇದರಿಂದ ಮೂತ್ರಕೋಶದಲ್ಲಿ ಕೊಳೆ ಶೇಖರಣೆಯಾಗುತ್ತದೆ. ಇದು ಮೂತ್ರಪಿಂಡಗಳಿಗೆ ಹಾನಿ ಉಂಟುಮಾಡಬಹುದು.
ನಿಂತು ನೀರು ಕುಡಿಯುವ ಅಭ್ಯಾಸದಿಂದ ನಿಮ್ಮ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚುತ್ತದೆ. ಇದು ಹೊಟ್ಟೆ ನೋವಿನಂತಹ ಸಮಸ್ಯೆ ಉಂಟುಮಾಡುತ್ತದೆ. ಅದೇ ರೀತಿ ನೀವು ಕುಳಿತು ನೀರು ಕುಡಿದರೆ ಈ ಆಮ್ಲವು ಕ್ರಮೇಣ ಮೂತ್ರದ ಮೂಲಕ ದೇಹದಿಂದ ಹೊರಹೋಗುತ್ತದೆ.