ಕಿವಿ ಹಣ್ಣು ಪೋಷಕಾಂಶಗಳಿಂದ ಕೂಡಿದೆ. ಕಿವಿ ಹಣ್ಣು ನಿಯಮಿತ ಸೇವನೆ ಆರೋಗ್ಯಕ್ಕೆ ಲಾಭಕಾರಿ ಎಂದು ಸಂಶೋಧನೆಗಳು ಹೇಳಿವೆ.
ಇದು ಪೌಷ್ಟಿಕಾಂಶದ ಸ್ಥಿತಿ ಸುಧಾರಿಸುತ್ತದೆ. ಜೀರ್ಣಕ್ರಿಯೆ, ರೋಗ ನಿರೋಧಕ ಶಕ್ತಿ ಮತ್ತು ಚಯಾಪಚಯ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ.
ಕಿವಿಹಣ್ಣು ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಸಾಕಷ್ಟು ಪ್ರಯೋಜನಕಾರಿ. ಜೊತೆಗೆ ದೇಹದ ಇತರ ವ್ಯವಸ್ಥೆಗಳಿಗೆ ತುಂಬಾ ಉಪಯುಕ್ತ.
ಕಿವಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಹಲವು ಪೋಷಕಾಂಶ ಹೊಂದಿದೆ. ವಿಶೇಷವಾಗಿ ಫೈಬರ್, ಪೊಟ್ಯಾಸಿಯಮ್ ಮತ್ತು ಫೋಲೇಟ್. ವ್ಯಾಪಕ ಶ್ರೇಣಿಯ ಉತ್ಕರ್ಷಣ ನಿರೋಧಕ ಮತ್ತು ಕಿಣ್ವ ಹೊಂದಿದೆ.
ಕಿವಿಹಣ್ಣು ಜೀರ್ಣಾಂಗ ವ್ಯವಸ್ಥೆಗೆ ವಿಶೇಷವಾಗಿ ಪ್ರಯೋಜನಕಾರಿ. ಗ್ಯಾಸ್ಟ್ರಿಕ್ ಮತ್ತು ಇಲಿಯಲ್ ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ.
ಕಿವಿಹಣ್ಣು ಹೃದಯವನ್ನು ಆರೋಗ್ಯಕರವಾಗಿ ಮತ್ತು ಸುರಕ್ಷಿತವಾಗಿರಿಸುತ್ತದೆ. ಪ್ರತಿದಿನವೂ 1 ಕಿವಿ ಹಣ್ಣು ಸೇರಿಸಿದರೆ ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
ಕಿವಿ ಹಣ್ಣು ಅಧಿಕ ರಕ್ತದೊತ್ತಡದ ಅಪಾಯಕಾರಿ ಅಂಶ ಕಡಿಮೆ ಮಾಡುತ್ತದೆ. ಕಿವಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಕಡಿಮೆ ಮಾಡುತ್ತದೆ. ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ.
ಕಿವಿಯಲ್ಲಿ ವಿಟಮಿನ್ ಸಿ ಇದೆ. ಆ್ಯಂಟಿ ಆಕ್ಸಿಡೆಂಟ್ ದೇಹದ ರೋಗ ನಿರೋಧಕ ಶಕ್ತಿ ಬಲಪಡಿಸುತ್ತದೆ. ವಿಟಮಿನ್ ಸಿ, ಇ ಮತ್ತು ಕೆ ಕೂಡ ಕಿವಿ ಹಣ್ಣು ಚರ್ಮ ಮತ್ತು ಕೂದಲಿಗೆ ಹೆಚ್ಚು ಪ್ರಯೋಜನ ನೀಡುತ್ತದೆ.