ದಿನನಿತ್ಯ ಬೆಲ್ಲವನ್ನು ಸೇವಿಸುವುದರಿಂದ ಲಿವರ್ ನಲ್ಲಿರುವ ಕಲ್ಮಶಗಳು ಹೊರಹೋಗುತ್ತವೆ.
ಊಟ ಮಾಡಿದ ಬಳಿಕ ಒಂದು ತುಂಡು ಬೆಲ್ಲ ತಿನ್ನುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತವೆ.
ಬೆಲ್ಲವನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ.
ಬೆಲ್ಲವು ರಕ್ತಹೀನತೆಯ ಸಮಸ್ಯೆಯನ್ನು ನಿವಾರಿಸಿ ಹಿಮೋಗ್ಲೋಬಿನ್ ಹೆಚ್ಚಿಸುತ್ತದೆ.
ಬೆಲ್ಲದಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದ್ದು, ಇದರಲ್ಲಿ ಐರನ್ ಸಾಕಷ್ಟಿದ್ದು ಗರ್ಭಿಣಿಯರಿಗೆ ಹೆಚ್ಚಿನ ಪ್ರಯೋಜನವಿದೆ.
ಪ್ರತಿದಿನ ಒಂದು ತುಂಡು ಬೆಲ್ಲ ಸೇವಿಸುವುದರಿಂದ ನೀವು ಸುಲಭವಾಗಿ ತೂಕ ಕಳೆದುಕೊಳ್ಳಬಹುದು.
ಸದ್ಯ ಸಿಗುವ ಬೆಲ್ಲದಲ್ಲಿ ಕಲಬೆರಕೆ ಅಂಶ ಹೆಚ್ಚಾಗಿದ್ದು, ಗುಣಮಟ್ಟದ ಬೆಲ್ಲ ಸೇವಿಸುವುದು ಅತಿಮುಖ್ಯ.