ಪಪ್ಪಾಯ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಣ್ಣು. ಇದರ ಸೇವನೆಯಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ. ಪಪ್ಪಾಯ ಹೇರಳ ವಿಟಮಿನ್ಗಳಿಂದ ಸಮೃದ್ಧವಾಗಿದೆ. ಕ್ಯಾನ್ಸರ್, ಮೂಳೆಗಳ ಬೆಳವಣಿಗೆಯಿಂದ ಹಿಡಿದು ಅಸ್ತಮಾವರೆಗೂ ಇದು ಪರಿಹಾರ ನೀಡುತ್ತದೆ.
ಪಪ್ಪಾಯ ಕಾಯಿ ದೇಹದಲ್ಲಿ ಜೀರ್ಣಶಕ್ತಿ ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ದೇಹವನ್ನು ಶುದ್ಧೀಕರಿಸಲು ನೆರವಾಗುತ್ತದೆ.
ಪಪ್ಪಾಯ ಹಣ್ಣು ಪ್ರೋಟೀನ್, ಫೈಟೊನ್ಯೂಟ್ರಿಯೆಂಟ್, ಪಪೈನ್ ಮತ್ತು ಚೈಮೊಪಪೈನ್ನಂತಹ ಕಿಣ್ವಗಳನ್ನು ಹೊಂದಿರುತ್ತದೆ. ಇದು ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕಡಿಮೆ ಮಾಡಿ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ.
ಪಪ್ಪಾಯ ಹಣ್ಣು ಸೇವನೆಯು ಹೃದಯದ ಸಮಸ್ಯೆಗೆ ತುಂಬಾ ಪ್ರಯೋಜನಕಾರಿ. ರೋಗ ನಿರೋಧಕ ಶಕ್ತಿ ಜೊತೆಗೆ ಶೀತ, ಜ್ವರ, ಕೆಮ್ಮಿನಿಂದ ಮುಕ್ತಿ ನೀಡುತ್ತದೆ. ಪಪ್ಪಾಯ ಕಾಯಿಯಿಂದ ನೀವು ಸಾಂಬಾರ್, ಪಲ್ಯದಂತಹ ಪದಾರ್ಥಗಳನ್ನು ತಯಾರಿಸಿ ಸೇವಿಸಬಹುದು.
ಆಹಾರದಲ್ಲಿ ಬದಲಾವಣೆಯಾದರೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಪ್ಪಾಯ ಕಾಯಿಯಲ್ಲಿ ನಾರಿನಂಶವಿದ್ದು, ಮಲಬದ್ಧತೆಯನ್ನು ತಡೆಯುತ್ತದೆ. ಪಪ್ಪಾಯ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕೂಡ ನಿಮ್ಮನ್ನು ಕಾಡುವುದಿಲ್ಲ.
ಪಪ್ಪಾಯ ಕಾಯಿಗಳು ಫೈಟೊಕೆಮಿಕಲ್ ಘಟಕಗಳು ಮತ್ತು ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣ ಹೊಂದಿವೆ. ಹಸಿರು ಪಪ್ಪಾಯಿಯ ಸಾರಗಳು ಚರ್ಮದ ಉರಿಯೂತ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಗಾಯವನ್ನು ಬೇಗನೆ ಗುಣಪಡಿಸಲು ಇದು ಸಹಕಾರಿಯಾಗಿದ್ದು, ಗಾಯಕ್ಕೆ ಸೋಂಕು ತಗುಲದಂತೆ ತಡೆಯುತ್ತದೆ.