ಆದರೆ ಕೆಲವು ಆರೋಗ್ಯ ಸಮಸ್ಯೆ ಇರುವವರು ಅಪ್ಪಿತಪ್ಪಿಯೂ ಹಲಸಿನ ಹಣ್ಣು ಸೇವಿಸಬಾರದು.
ಅಜೀರ್ಣ ಸಮಸ್ಯೆಯಿಂದ ಬಳಲುತ್ತಿರುವವರು ಹಲಸಿನ ಹಣ್ಣಿನಿಂದ ದೂರವಿರುವುದು ಉತ್ತಮ.
ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಹಲಸಿನ ಹಣ್ಣು ಸೇವಿಸದೇ ಇರುವುದು ಉತ್ತಮ.
ಹಲಸಿನ ಹಣ್ಣು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುವ ಅಪಾಯವಿದ್ದು, ಮಧುಮೇಹದಿಂದ ಬಳಲುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ಹಲಸಿನ ಹಣ್ಣು ತಿನ್ನಬಾರದು.
ಗರ್ಭಿಣಿಯರು ಹಲಸಿನ ಹಣ್ಣು ತಿನ್ನುವಾಗ ಎಚ್ಚರಿಕೆ ವಹಿಸಬೇಕು. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದ ಸಕ್ಕರೆಯಿಂದ ಬಳಲುತ್ತಿರುವ ಮಹಿಳೆಯರು ಇದನ್ನು ತಪ್ಪಿಸಬೇಕು.
ಹಲಸು ರಕ್ತ ಹೆಪ್ಪುಗಟ್ಟುವಿಕೆಯನ್ನು ವೇಗಗೊಳಿಸುತ್ತದೆ, ರಕ್ತ ಸಂಬಂಧಿತ ಕಾಯಿಲೆಗಳಿರುವವರು ಹಲಸಿನ ಹಣ್ಣು ಸೇವಿಸುವುದನ್ನು ತಪ್ಪಿಸಬೇಕು.
ನಂಜು, ಹೊಟ್ಟೆನೋವು, ಅಗ್ನಿ, ಕ್ಷಯ, ಶುಕ್ರನಷ್ಟ, ಅಂಡಾಶಯ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಲಸಿನ ಹಣ್ಣನ್ನು ತಿನ್ನಬಾರದು.
ಅಧಿಕ ತೂಕ ಮತ್ತು ಅಲರ್ಜಿ ಇರುವವರು ಕೂಡ ಹಲಸಿನ ಹಣ್ಣನ್ನು ಸೇವಿಸಬಾರದು.