ಪೈಲ್ಸ್‌ ಸಮಸ್ಯೆಗೆ ಮನೆಮದ್ದು

ಪೈಲ್ಸ್ ಸಮಸ್ಯೆಯನ್ನ ನಿರ್ಲಕ್ಷ್ಯಿಸುತ್ತಾ ಹೋದರೆ ಮುಂದೆ ದೊಡ್ಡ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಈ ಸಮಸ್ಯೆ ಗುಣಪಡಿಸುವುದು ಹೇಗೆಂದು ತಿಳಿಯಿರಿ..

Puttaraj K Alur
Jun 23,2025

ಕಳಪೆ ಜೀವನಶೈಲಿ

ಕಳಪೆ ಜೀವನಶೈಲಿ & ಕೆಟ್ಟ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು & ಹೆಚ್ಚು ಹೊತ್ತು ಕುಳಿತು ಒಂದೇ ಕಡೆ ಕೆಲಸ ಮಾಡುವುದರಿಂದ ಪೈಲ್ಸ್ ಸಮಸ್ಯೆ ಉಂಟಾಗುತ್ತದೆ.

ದೇಹದಲ್ಲಿ ತ್ಯಾಜ್ಯ

ಆಹಾರದಲ್ಲಿ ನಾರಿನಂಶವಿರುವ ಆಹಾರ ಸೇವಿಸದಿರುವುದರಿಂದ ದೇಹದಲ್ಲಿ ತ್ಯಾಜ್ಯವು ಹೆಚ್ಚು ಸಂಗ್ರಹವಾಗುತ್ತದೆ. ಇದು ಮುಂದೆ ಪೈಲ್ಸ್ ಸಮಸ್ಯೆಯಾಗಿ ಕಾಡುತ್ತದೆ.

ಕುದಿಸಿದ ಹಾಲು

ಕುದಿಸಿದ ಹಾಲು ತಣ್ಣಗಾದ ನಂತರ ಅದಕ್ಕೆ ನಿಂಬೆ ರಸವನ್ನು ಹಾಕಿ ಕುಡಿಯುವುದರಿಂದ ಪೈಲ್ಸ್ ಸಮಸ್ಯೆ ಗುಣವಾಗುತ್ತದೆ.

ನಿಂಬೆ ರಸ

1 ಕಪ್ ಕುದಿಸಿದ ಹಾಲು ತಣ್ಣಗಾದ ನಂತರ ಅದಕ್ಕೆ ಅರ್ಧ ನಿಂಬೆ ರಸ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಕ್ಷಣ ಕುಡಿಯಿರಿ.

ಕರುಳಿನ ಉರಿ

ಇದನ್ನ 3 ರಿಂದ 7 ದಿನಗಳ ಕಾಲ ಕುಡಿದರೆ ಕರುಳಿನ ಉರಿ ವಾಸಿಯಾಗುತ್ತದೆ ಮತ್ತು ಪೈಲ್ಸ್ ಸಮಸ್ಯೆ ನಿವಾರಣೆಯಾಗುತ್ತದೆ.

ಅಲೋವೆರಾ ಜ್ಯೂಸ್

ಪೈಲ್ಸ್ ಸಮಸ್ಯೆ ಇದ್ದಲ್ಲಿ ಪ್ರತಿದಿನ ಫೈಬರ್ ಸಮೃದ್ಧವಾಗಿರುವ ಅಲೋವೆರಾ ಜ್ಯೂಸ್ ಕುಡಿಯುವುದು ಸಹ ಪ್ರಯೋಜನಕಾರಿಯಾಗಿದೆ.

3 ಲೀಟರ್ ನೀರು

ಪೈಲ್ಸ್ ಸಮಸ್ಯೆ ಇರುವವರು ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ. ಪೈಲ್ಸ್‌ನಿಂದ ಬಳಲುತ್ತಿರುವ ವ್ಯಕ್ತಿಯು ದಿನಕ್ಕೆ ಕನಿಷ್ಠ 3 ಲೀಟರ್ ನೀರನ್ನು ಕುಡಿಯಬೇಕು.

VIEW ALL

Read Next Story