ಇಂದಿನ ಒತ್ತಡಮಯ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಪುರುಷರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ವೀರ್ಯಾಣುಗಳ ಕೊರತೆಯೂ ಒಂದು.
ಪುರುಷರಲ್ಲಿ ವೀರ್ಯಾಣು ವೃದ್ಧಿಗೆ ಅಡುಗೆ ಮನೆಯಲ್ಲಿಯೇ ಅನೇಕ ಆಹಾರಗಳಿವೆ. ನಿಯಮಿತವಾಗಿ ಇವುಗಳನ್ನು ಸೇವಿಸುವುದರಿಂದ ನಿಮ್ಮ ವೀರ್ಯಾಣುಗಳ ಸಂಖ್ಯೆ ಹೆಚ್ಚಾಗುತ್ತದೆ.
ವಿಟಮಿನ್ C ಅಂಶವಿರುವ ಟೊಮೆಟೋ ನಮ್ಮ ಅಡುಗೆ ಮನೆಯಲ್ಲಿ ಇದ್ದೇ ಇರುತ್ತದೆ. ಪ್ರತಿನಿತ್ಯ 1 ಲೋಟ ಟೊಮೆಟೋ ಜ್ಯೂಸ್ ಮಾಡಿ ಕುಡಿಯುವುದರಿಂದ ವೀರ್ಯಾಣು ಸಂಖ್ಯೆ ವೃದ್ಧಿಯಾಗುತ್ತದೆ.
ವಿಟಮಿನ್ E ಅಂಶ ಹೇರಳವಾಗಿರುವ ಮೊಟ್ಟೆಯನ್ನು ಪ್ರತಿನಿತ್ಯವೂ ಸೇವಿಸುವುದರಿಂದ ವೀರ್ಯಾಣುಗಳ ಸಂಖ್ಯೆ ವೃದ್ಧಿ ಉತ್ತಮವಾಗುತ್ತದೆ.
ಸ್ಟ್ರಾಬೆರಿ, ನೇರಳೆ ಹಣ್ಣು ಮುಂತಾದವುಗಳಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹೇರಳವಾಗಿರುತ್ತದೆ. ಇಂತಹ ಹಣ್ಣು ಪುರುಷರ ದೇಹದಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತವೆ.
ಪ್ರತಿನಿತ್ಯವೂ 1 ಕಪ್ ದಾಳಿಂಬೆ ಜ್ಯೂಸ್ ಕುಡಿಯುತ್ತಿದ್ದರೆ ವೀರ್ಯಾಣು ಸಂಖ್ಯೆ ವೃದ್ಧಿಯಾಗುತ್ತದೆ.
ಬೆಳ್ಳುಳ್ಳಿ ಅಸಿಡಿಟಿ, ರಕ್ತದೊತ್ತಡ ಮುಂತಾದ ಸಮಸ್ಯೆಗೆ ಮಾತ್ರವಲ್ಲ ಆರೋಗ್ಯವಂತ ವೀರ್ಯಾಣುಗಳ ವೃದ್ಧಿಗೆ ಸಹ ಉತ್ತಮ.
ಪಾಲಕ್ ಸೊಪ್ಪಿನಲ್ಲಿ ಹೇರಳ ನಾರಿನಂಶ ಮತ್ತು ಪ್ರೋಟಿನ್ಗಳಿವೆ. ಇದರಲ್ಲಿ ಕಬ್ಬಿಣಾಂಶ ಇದ್ದು, ವಾರಕ್ಕೆ ೩ ಬಾರಿ ಸೇವಿಸಿದರೆ ಆರೋಗ್ಯಕ್ಕೆ ಬಹಳ ಉತ್ತಮ. ಇದನ್ನು ಆಹಾರದಲ್ಲಿ ಸೇವಿಸಿದ್ರೆ ನಿಮ್ಮ ವೀರ್ಯಾಣು ವೃದ್ಧಿಯಾಗುತ್ತದೆ.