ನಿಯಮಿತವಾಗಿ ಎಲೆಕೋಸು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನ ಪಡೆಯಬಹುದು.
ಎಲೆಕೋಸಿನಲ್ಲಿ ವಿಟಮಿನ್ K, B6, C, B ಕಾಂಪ್ಲೆಕ್ಸ್, ವಿಟಮಿನ್ B1 ಸಮೃದ್ಧವಾಗಿದೆ.
ಮ್ಯಾಂಗನೀಸ್, ಪೊಟ್ಯಾಶಿಯಂ, ನಾರಿನ ಅಂಶ ಮತ್ತು ತಾಮ್ರದ ಅಂಶ ಕೂಡ ಎಲೆಕೋಸಿನಲ್ಲಿ ಹೇರಳವಾಗಿವೆ.
ಮೆಗ್ನೀಷಿಯಂ, ಕ್ಯಾಲ್ಸಿಯಂ, ನಯಾಸಿನ್, ಪಾಸ್ಪರಸ್, ಸೆಲೆನಿಯಂ, ಪ್ಯಾಂಟೋಥೆನಿಕ್ ಆಸಿಡ್, ಪ್ರೋಟೀನ್ ಅಂಶವೂ ಹೆಚ್ಚಾಗಿದೆ.
ಎಲೆಕೋಸು ನಮ್ಮ ಆರೋಗ್ಯಕ್ಕೆ ದಿನದ ಅಗತ್ಯತೆಗೆ ತಕ್ಕಂತೆ ಯಾವುದೇ ಪೌಷ್ಟಿಕಾಂಶಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತದೆ.
ಎಲೆಕೋಸು ನಮ್ಮ ದೇಹದಲ್ಲಿನ ಹಾನಿಕಾರಕ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಿ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ದೂರ ಮಾಡುತ್ತದೆ.
ಎಲೆಕೋಸು ಚರ್ಮದ ಅಲರ್ಜಿ, ಕೀಲುನೋವು, ಉರಿಯೂತ ಮತ್ತು ಇನ್ನಿತರ ಚರ್ಮದ ಸಮಸ್ಯೆಗಳನ್ನು ಸುಲಭವಾಗಿ ನಿವಾರಣೆ ಮಾಡುತ್ತದೆ.
ಎಲೆಕೋಸು ಸೇವನೆಯು ಕಣ್ಣಿನ ಆರೋಗ್ಯಕ್ಕೆ ಉತ್ತಮವೆಂದು ಹೇಳಲಾಗಿದೆ.